ಜ.22ರಿಂದ ಅರಸ್ತಾನದಲ್ಲಿ ಧಾರ್ಮಿಕ ಪ್ರವಚನ, ಉರೂಸ್
ಮಂಗಳೂರು, ಜ.21: ಪಾವೂರು ಗ್ರಾಮದ ಮಲಾರ್ ಅರಸ್ತಾನದ ಅಲ್ ಮುಬಾರಕ್ ಜುಮಾ ಮಸ್ಜಿದ್ ಮತ್ತು ಅಲ್ ರಿಫಾಯಿಯ್ಯಾ ನುಸ್ರತುಲ್ ಮುಸ್ಲಿಮೀನ್ ಅಸೋಸಿಯೇಶನ್‌ನ 49ನೆ ವಾರ್ಷಿಕೋತ್ಸವದ ಅಂಗವಾಗಿ ಸ್ವಲಾತ್ ಮಜ್ಲಿಸ್, ರಿಫಾಈ ರಾತೀಬ್, ಮಜ್ಲಿಸುನ್ನೂರ್ ಹಾಗೂ ಧಾರ್ಮಿಕ ಪ್ರವಚನ ಮತ್ತು ಉರೂಸ್ ಕಾರ್ಯಕ್ರಮವು ಜ.22ರಿಂದ 26ರವರೆಗೆ ಅಲ್ ಮುಬಾರಕ್ ಮಸೀದಿಯ ವಠಾರದಲ್ಲಿ ನಡೆಯಲಿದೆ.
ಮಸೀದಿಯ ಅಧ್ಯಕ್ಷ ಎಂ.ಪಿ. ಅಬ್ದುಲ್ ರಹ್ಮಾನ್‌ರ ಅಧ್ಯಕ್ಷತೆಯಲ್ಲಿ ಜ.22ರಂದು ಇಶಾ ನಮಾಝ್ ಬಳಿಕ ನಡೆಯುವ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್-ಅಝ್‌ಹರಿ ಉದ್ಘಾಟಿಸಲಿದ್ದಾರೆ. ಮಸೀದಿಯ ಖತೀಬ್ ಮುಹಮ್ಮದ್ ಶಫೀಕ್ ಕೌಸರಿ ಕುಕ್ಕಾಜೆ ಮತಪ್ರವಚನ ನೀಡುವರು.
ಜ.23ರಂದು ಹಮೀದ್ ಫೈಝಿ ಕಿಲ್ಲೂರು, ಜ.24ರಂದು ಆರೀಫ್ ಬಾಖವಿ, ಜ.25ರಂದು ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಮಜ್ಲಿಸುನ್ನೂರ್‌ಗೆ ನೇತೃತ್ವ ನೀಡಿ ಮತಪ್ರವಚನಗೈಯುವರು. ಜ.26ರಂದು ಉರೂಸ್ ಸಮಾರಂಭ ದಲ್ಲಿ ಸೈಯದ್ ಶರಫುದ್ದೀನ್ ತಂಳ್ ಫರೀದ್‌ನಗರ ದುಆ ಆಶೀರ್ವಚನ ನೀಡುವರು. ಅಲ್ಹಾಜ್ ಎನ್‌ಎಚ್ ಆದಂ ಫೈಝಿ ರಿಫಾಯಿ ರಾತೀಬ್‌ಗೆ ನೇತೃತ್ವ ನೀಡಿ ಮತಪ್ರವಚನಗೈಯುವರು.
ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ಮಸೀದಿಯ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಮೋನು, ಹಂಝ ಮಲಾರ್, ಹಾಮದ್ ಅಲ್ತಾಫ್, ಎಸ್‌ಡಿಪಿಐ ರಾಷ್ಟ್ರೀಯ ಮುಖಂಡ ರಿಯಾಝ್ ಫರಂಗಿಪೇಟೆ, ಉದ್ಯಮಿಗಳಾದ ಲತೀಫ್ ಗುರುಪುರ, ಐ.ಎಸ್. ಹನೀಫ್, ಮಜೀದ್ ಎಂ.ಕೆ., ಪಾವೂರು ಗ್ರಾಪಂ ಅಧ್ಯಕ್ಷ ಮಜೀದ್ ಸಾತ್ಕೋ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.