ಫೆ.22: ಸಚಿವ ಪ್ರಿಯಾಂಕ್ ಖರ್ಗೆ ದ.ಕ.ಜಿಲ್ಲೆಗೆ ಭೇಟಿ

ಮಂಗಳೂರು ಫೆ.20: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಫೆ.22ರಂದು ದ.ಕ.ಜಿಲ್ಲೆಗೆ ಆಗಮಿಸಲಿದ್ದಾರೆ.
ಬೆಳಗ್ಗೆ 10:30ಕ್ಕೆ ನಗರದ ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಗ್ರಾಮಸ್ವರಾಜ್ ಪ್ರತಿಷ್ಠಾನ ವತಿಯಿಂದ ಹೊಂಬೆಳಕು-2025 ಸ್ಥಳೀಯಾಡಳಿತದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸುವರು. 12:30ಕ್ಕೆ ಸಹ್ಯಾದ್ರಿ ಸ್ಟಾರ್ಟ್ ಅಪ್ ಫೆಸಿಲಿಟಿಗೆ ಭೇಟಿ ನೀಡಿ ವಾಣಿಜ್ಯೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2ಕ್ಕೆ ಸಸಿಹಿತ್ಲು ಸಮುದ್ರ ತೀರಕ್ಕೆ ಭೇಟಿ ನೀಡುವರು. ಸಂಜೆ 4:45ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story