ಆ.22: ಅಲ್ ಮದೀನಾ ವತಿಯಿಂದ ಮೀಲಾದ್ ಘೋಷಣಾ ರ್ಯಾಲಿ

ದೇರಳಕಟ್ಟೆ, ಆ.17: ಪ್ರವಾದಿ ಮುಹಮ್ಮದ್ (ಸ.ಅ)ರ 1500ನೇ ಜನ್ಮ ವರ್ಷಕ್ಕೆ ಸ್ವಾಗತ ಕೋರಿ ಮಂಜನಾಡಿ ಅಲ್ ಮದೀನ ಸಂಸ್ಥೆಯ ವತಿಯಿಂದ ಆ.22ರಂದು ಅಪರಾಹ್ನ 3:30ಕ್ಕೆ ದೇರಳಕಟ್ಟೆ ಸರ್ಕಲ್‌ನಿಂದ-ನಾಟೆಕಲ್ ಸರ್ಕಲ್‌ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ.
ಸಾಮಾಜಿಕ, ಧಾರ್ಮಿಕ ಹಾಗೂ ಸ್ಥಳೀಯ ಮುಖಂಡರ ಸಹಭಾಗಿತ್ವದಲ್ಲಿ ನಡೆಯುವ ರ್ಯಾಲಿಯ ಪೂರ್ವ ಸಿದ್ಧತೆಗಾಗಿ ಸ್ವಾಗತ ಸಮಿತಿ ರಚನಾ ಸಭೆಯು ದೇರಳಕಟ್ಟೆ ತಾಜುಲ್ ಉಲಮಾ ಮಸ್ಜಿದ್‌ನಲ್ಲಿ ನಡೆಯಿತು.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಏಷಿಯನ್ ಬಾವ ಹಾಜಿ, ಸಂಚಾಲಕರಾಗಿ ಮಹಬೂಬ್ ಸಖಾಫಿ, ಸಹ ಸಂಚಾಲಕರಾಗಿ ಸಿದ್ದೀಕ್ ಹಾಜಿ, ಫೈನಾನ್ಶಿಯಲ್ ಸೆಕ್ರೆಟರಿಯಾಗಿ ನಾಸಿರ್ ಹಾಜಿ, ಕಾನೂನು ಸುವ್ಯವಸ್ಥೆ ವಿಭಾಗದ ಮುಖ್ಯಸ್ಥರಾಗಿ ಶೌಕತ್ ಹಾಜಿ, ಸಂಚಾಲಕರಾಗಿ ಶಮೀರ್ ದೇರಳಕಟ್ಟೆ ಆಯ್ಕೆಯಾದರು.
ಸಮಿತಿಯ ಸದಸ್ಯರಾಗಿ ಅಮ್ಮಿ ಹಾಜಿ, ಬಶೀರ್ ಹಾಜಿ, ಸುಲೈಮಾನ್ ಹಾಜಿ, ಗುಡ್‌ಲಕ್ ಕಬೀರ್ ಹಾಜಿ, ಅಶ್ರಫ್ ಹಾಜಿ, ರಝ್ವಿ ಉಸ್ತಾದ್, ಝಿರಾರ್ ಅಬ್ದುಲ್ಲ, ಹಬೀಬ್ ಸಖಾಫಿ, ಸ್ವಾದಿಕ್ ಗುಡ್‌ಲಕ್ ಅವರನ್ನು ಆರಿಸಲಾಯಿತು.
ಅಲ್ ಮದೀನ ಆಡಳಿತ ಸಮಿತಿ ಸದಸ್ಯರಾದ ಎನ್.ಎಸ್. ಕರೀಂ, ಮುಹಮ್ಮದ್ ಕುಂಞಿ ಅಮ್ಜದಿ, ಅಬುಸಾಲಿಹ್ ಅಝ್ಹರಿ, ಅಧ್ಯಾಪಕರಾದ ಸಯ್ಯಿದ್ ಉವೈಸ್ ತಂಙಳ್, ಮನ್ಸೂರ್ ಹಿಮಮಿ, ಇಕ್ಬಾಲ್ ಮರ್ಝೂಕಿ, ಸಲಾಂ ಅಹ್ಸನಿ, ಹಾಫಿಲ್ ಮರ್ಸದ್, ಝೈನುಲ್ ಆಬಿದ್ ಸಖಾಫಿ ಉಪಸ್ಥಿತರಿದ್ದರು.







