ಫೆ.22, 23 ಸಮಸ್ತ ಸ್ಕೂಲ್ ಕ್ಯಾಲೆಂಡರ್ ಪಬ್ಲಿಕ್ ಪರೀಕ್ಷೆ: ಹುಬ್ಬಳ್ಳಿ ನೂತನ ಡಿವಿಷನ್ ಸೆಂಟರ್ ನಲ್ಲಿ ಸಿದ್ಧತೆಗಳು ಪೂರ್ಣ
ಎಲ್ಲಾ ಪರಿಕ್ಷಾರ್ಥಿಗಳಿಗೆ ವಿಶೇಷ ಉಡುಗೊರೆಗಳು

ಸಾಂದರ್ಭಿಕ ಚಿತ್ರ
ಮಂಗಳೂರು: ದೇಶದ ಪ್ರತಿಷ್ಠಿತ ಧಾರ್ಮಿಕ ಶಿಕ್ಷಣ ಮಂಡಳಿಯಾದ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದ ಸ್ಕೂಲ್ ಸಿಲಬಸ್ ಕ್ರಮದಲ್ಲಿ ನೊಂದಾಯಿತಗೊಂಡ ಮದರಸಗಳ ಪ್ರಸಕ್ತ ಶೈಕ್ಷಣಿಕ ವರ್ಷದ 5,7,10,12 ತರಗತಿಗಳ ಪಬ್ಲಿಕ್ ಪರೀಕ್ಷೆಗಳು ಫೆಬ್ರವರಿ 22,23ರಂದು ನಡೆಯಲಿದೆ.
ಬೆಂಗಳೂರು ಸಹಿತ ಒಟ್ಟು 39 ಡಿವಿಷನ್ ಕೇಂದ್ರಗಳು ಇದಕ್ಕಾಗಿ ನಿಗದಿಪಡಿಸಲಾಗಿದ್ದು ನೂತನವಾಗಿ ರಚನೆಗೊಂಡ ಹುಬ್ಬಳ್ಳಿ ಡಿವಿಷನ್ ಕೇಂದ್ರದಲ್ಲಿ ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ.
ಪಾಣಕ್ಕಾಡ್ ಸಯ್ಯಿದ್ ಮುಹಮ್ಮದಲಿ ಶಿಹಾಬ್ ತಂಙಳ್ ನ್ಯಾಷನಲ್ ಮಿಷನ್ ನೇತೃತ್ವದ ಕುಂದುಗೋಳ ರೇಂಜ್ ಹಾಗೂ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಮಿತ್ತಬೈಲ್ ಉಸ್ತಾದ್ ಎಜುಕೇಶನ್ ಟ್ರಸ್ಟ್ ನೇತೃತ್ವದ ಧಾರವಾಡ ರೇಂಜ್ ಅಧೀನದ 30 ಮದರಸಗಳ ಅಪೇಕ್ಷಾರ್ಥಿಗಳು ಇದೇ ಮೊದಲ ಬಾರಿಗೆ ಈ ಡಿವಿಷನ್ ಕೇಂದ್ರದ ವ್ಯಾಪ್ತಿಯ ವಿವಿಧ ಸೆಂಟರ್ ಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಹಿತಿ ಶಿಬಿರ
ಪರೀಕ್ಷೆಯ ಪೂರ್ವವಾಗಿ ಹುಬ್ಬಳ್ಳಿ ರೈಲ್ವೆ ಸ್ಟೇಷನ್ ಸಮೀಪದ ಮೌಲಾ ಅಲಿ ಮದರಸದಲ್ಲಿ ಪರೀಕ್ಷೆಗೆ ತೆರಳುವ ಮೇಲ್ವಿಚಾ ರಕರಿಗೆ ಮಾಹಿತಿ ಶಿಬಿರ ಹಾಗೂ ಪರಿಕರಗಳ ವಿತರಣೆ ನಡೆಯಲಿದ್ದು ಶಿಹಾಬ್ ತಂಗಳ್ ನ್ಯಾಷನಲ್ ಮಿಷನ್ ಅಧ್ಯಕ್ಷರಾದ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರವಾಡ ರೇಂಜ್ ಅಧ್ಯಕ್ಷರಾದ ಯೂಸುಫ್ ಹುದವಿ ಚಿತ್ರದುರ್ಗ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹುಬ್ಬಳ್ಳಿ ಡಿವಿಷನ್ ಸಮಸ್ತ ಪಬ್ಲಿಕ್ ಪರೀಕ್ಷೆ ಸುಪ್ರೆಂಡರಾದ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪರೀಕ್ಷಾ ಮಾಹಿತಿ ನೀಡಲಿದ್ದಾರೆ.
ನ್ಯಾಷನಲ್ ಮಿಷನ್ ಕೋ ಆರ್ಡಿನೇಟರ್ ಮೌಲಾನ ಅಬ್ದುಲ್ ರಹಮಾನ್ ದಾಯಿ, ಮಿತ್ತಬೈಲ್ ಉಸ್ತಾದ್ ಎಜುಕೇಶನ್ ಟ್ರಸ್ಟ್ ಕೋಆರ್ಡಿನೇಟರ್ ಶರಫುದ್ದೀನ್ ಅಝಹರಿ, ಹೈದರ್ ದಾರಿಮಿ ಉಸ್ತಾದ್ ಪೂರ್ವ ವಿದ್ಯಾರ್ಥಿ ಒಕ್ಕೂಟದ ಕೋ ಆರ್ಡಿನೇಟರ್ ಇಬ್ರಾಹಿಂ ಬಾತಿಶ ಶಂಸಿ, ಹುಬ್ಬಳ್ಳಿಯ ಸಮಸ್ತ ಮುಖಂಡರಾದ ನೌಶಾದ್ ಕಿಶಾನ್, ಅಬ್ದುಲ್ ರಝಾಕ್ ಕಾಸರಗೋಡು,ತಹ್ಸೀಮ್ ಧಾರವಾಡ ಮೊದಲಾದವರು ವಿಶಿಷ್ಟ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಎಲ್ಲಾ ಪರಿಕ್ಷಾರ್ಥಿಗಳಿಗೆ ವಿಶೇಷ ಉಡುಗೊರೆಗಳು
ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸಮಸ್ತ ಪಬ್ಲಿಕ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹಾಜರಾಗುತ್ತಿದ್ದು ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಸಮಸ್ತ ನೂರನೇ ವಾರ್ಷಿಕೋತ್ಸವದ ಪ್ರಯುಕ್ತ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿಯಾಗಿದ್ದ ಎಂ.ಎ ಕಾಸಿಂ ಉಸ್ತಾದ್ ಸ್ಮರಣಾರ್ಥವಾಗಿ ಅವರ ಪ್ರಮುಖ ಶಿಷ್ಯರಾದ ರಫೀಕ್ ಫೈಝಿ ಕನ್ಯಾನ ವಿಶಿಷ್ಟ ಉಡುಗೊರೆಯನ್ನು ನೀಡಲಿದ್ದಾರೆ ಎಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







