ಎ.23: ʼಯತೀಮ್’ ಬ್ಯಾರಿ ಕಾದಂಬರಿ ಬಿಡುಗಡೆ

ಮಂಗಳೂರು, ಎ.21: ಯೆನೆಪೊಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ ಮೆಂಟ್ ಕೂಳೂರು, ಮಂಗಳೂರು ಇದರ ಮಾರ್ದನಿ’ ಕನ್ನಡ ಜರ್ನಲ್ ವೆಬ್‌ಸೈಟ್ ಲೋಕಾರ್ಪಣೆ ಮತ್ತು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಿಯಾಝ್ ಪಡೀಲ್ ರಚಿಸಿದ ಕನ್ನಡ ಕಾದಂಬರಿಯ ಬ್ಯಾರಿ ಅನುವಾದಿತ ಕೃತಿ ಱಯತೀಮ್ ಬಿಡುಗಡೆ ಕಾರ್ಯಕ್ರಮವು ಎ.23ರಂದು ಬೆಳಗ್ಗೆ 10ಕ್ಕೆ ಕೂಳೂರಿ ನಲ್ಲಿರುವ ಕಾಲೇಜಿನ ವೈ.ಎಂ.ಕೆ ಸಭಾಂಗಣದಲ್ಲಿ ನಡೆಯಲಿದೆ.
ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಉಜಿರೆ ಎಸ್‌ಡಿಎಂ ಕಾಲೃಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ವೆಬ್‌ಸೈಟ್ ಅನಾವರಣಗೊಳಿಸಲಿದ್ದಾರೆ. ಯೆನೆಪೊಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ. ಅರುಣ್ ಎ. ಭಾಗವತ್ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಅಭಿಮತ ಟಿ.ವಿ. ಚಾನೆಲ್‌ನ ಮುಖ್ಯಸ್ಥೆ ಡಾ. ಮಮತಾ ಪಿ. ಶೆಟ್ಟಿ, ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಶಮೀಮಾ ಕುತ್ತಾರ್ ಭಾಗವಹಿಸುವರು. ಬ್ಯಾರಿ ಅಧ್ಯಯನ ಪೀಠದ ಸದಸ್ಯ ಹಂಝ ಮಲಾರ್ ’ಯತೀಮ್’ ಬಗ್ಗೆ ಮಾತಾಡಲಿದ್ದಾರೆ. ಕೃತಿಯ ಲೇಖಕ ನಿಯಾಝ್ ಪಡೀಲ್ ಮತ್ತು ಕೃತಿಯ ಅನುವಾದಕ ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಉಪ ಪ್ರಾಂಶುಪಾಲೆ ಡಾ. ಶರೀನಾ ಪಿ, ಡಾ. ಜೀವನ್‌ರಾಜ್, ನಾರಾಯಣ ಸುಕುಮಾರ ಎ, ಶಾಲಿನಿ ಸಿಕ್ವೇರ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.







