ಅ.24: ಯುನಿವೆಫ್ - ವಾಟ್ಸ್‌ಆ್ಯಪ್ ಅಡ್ಮಿನ್‌ಗಳ ಸ್ನೇಹ ಮಿಲನ

ಮಂಗಳೂರು, ಆ.22: ಯುನಿವೆಫ್ ಕರ್ನಾಟಕವು ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ 20ನೇ ವರ್ಷದ ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಅಂಗವಾಗಿ ವಾಟ್ಸ್‌ಆ್ಯಪ್ ಅಡ್ಮಿನ್‌ಗಳ ಸ್ನೇಹ ಮಿಲನ ಕಾರ್ಯಕ್ರಮವು ಅ.24ರ ಸಂಜೆ 5ಕ್ಕೆ ನಗರದ ಫಳ್ನೀರ್ ಇಂದಿರಾ ಆಸ್ಪತ್ರೆ ಬಳಿ ಇರುವ ಲುಲು ಸೆಂಟರ್‌ನ ಅಲ್ ವಹ್ದಃ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರವಾದಿ ನಿಂದನೆ, ಸಮಾಜದ ಶೋಷಣೆ ಮತ್ತು ನಾವು ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ತಮ್ಮ ಅಭಿಪ್ರಾಯ, ಯೋಜನೆ ಹಾಗೂ ಸಲಹೆಗಳನ್ನು ನೀಡಿ ಜನಜಾಗೃತಿಗೊಳಿಸುವುದು ಮತ್ತು ಜನರ ಮಧ್ಯೆ ಇರುವ ಅಪಕಲ್ಪನೆಗಳನ್ನು ದೂರೀಕರಿಸಲು ಯುನಿವೆಫ್ ಮುಂದಾಗಿದೆ. ಹೆಸರು ನೋಂದಣಿಗೆ ವಾಟ್ಸ್‌ಆ್ಯಪ್ (9606319931)ಗೆ ಅಡ್ಮಿನ್‌ಗಳ ಹೆಸರು ಮತ್ತು ಗ್ರೂಪಿನ ಹೆಸರನ್ನು ಕಳುಹಿಸಲು ಅಭಿಯಾನದ ಸಂಚಾಲಕ ಯು.ಕೆ.ಖಾಲಿದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





