ಜೂ.24, 25ರಂದು ಕುಲಶೇಖರ ಉಪ ಅಂಚೆ ಕಚೇರಿಗಳಲ್ಲಿ ವ್ಯವಹಾರ ಬಂದ್

ಮಂಗಳೂರು, ಜೂ.22: ತಂತ್ರಜ್ಞಾನ ಉನ್ನತೀಕರಣದ ಹಿನ್ನೆಲೆಯಲ್ಲಿ ಕುಲಶೇಖರ ಪ್ರಧಾನ ಪ್ರಧಾನ ಅಂಚೆ ಕಚೇರಿಯ ವ್ಯಾಪ್ತಿಗೆ ಬರುವ ಎಲ್ಲಾ ಉಪ ಅಂಚೆ ಕಚೇರಿಗಳಲ್ಲಿ ಜೂನ್ 24 ಮತ್ತು 25 ತನಕ ಯಾವುದೇ ವ್ಯವಹಾರ ಇರುವುದಿಲ್ಲ ಎಂದು ಅಂಚೆ ಇಲಾಖೆಯ ಪ್ರಕಟನೆ ತಿಳಿಸಿದೆ.
ಅಂಚೆ ಇಲಾಖೆಯು ತನ್ನ ದೈನಂದಿನ ವ್ಯವಹಾರದಲ್ಲಿ ಬಳಸುತ್ತಿರುವ ತಂತ್ರಜ್ಞಾನವನ್ನು ಉತ್ತಮ ಗ್ರಾಹಕ ಸೇವೆಗಾಗಿ ಉನ್ನತಿಕರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಕುಲಶೇಖರ ಪ್ರಧಾನ ಅಂಚೆ ಕಚೇರಿಯ ವ್ಯಾಪ್ತಿಗೆ ಬರುವ ಎಲ್ಲಾ ಉಪ ಅಂಚೆ ಕಚೆೇರಿಗಳಲ್ಲಿ ಎರಡು ದಿನಗಳ ಕಾಲ ಯಾವುದೇ ವ್ಯವಹಾರ ಇರುವುದಿಲ್ಲ. ಜೂನ್ 26ರಿಂದ ಎಲ್ಲ ಸೇವೆಗಳು ಎಂದಿನಂತೆ ಲಭ್ಯವಿರಲಿದೆ. ಈ ದಿನಗಳಂದು ಮಂಗಳೂರು ಪ್ರಧಾನ ಅಂಚೆ ಕಚೇರಿ ಮತ್ತು ಅದರ ವ್ಯಾಪ್ತಿಗೆ ಬರುವ ಎಲ್ಲಾ ಉಪ ಮತ್ತು ಶಾಖಾ ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





