ಫೆ.25ರಿಂದ ಡಿವೈಎಫ್ ಐ ರಾಜ್ಯ ಸಮ್ಮೇಳನ: ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ನಿವೃತ್ತ ಡಿಸಿ ಎ.ಬಿ.ಇಬ್ರಾಹೀಂ ಆಯ್ಕೆ

ಎ.ಬಿ.ಇಬ್ರಾಹೀಂ
ಮಂಗಳೂರು, ಡಿ.6: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ಇದರ ಕರ್ನಾಟಕ ರಾಜ್ಯ ಸಮ್ಮೇಳನವು ಫೆಬ್ರವರಿ 25ರಿಂದ 27ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ. ಇದರ ಸ್ವಾಗತ ಸಮಿತಿ ರಚನಾ ಸಭೆಯು ನಗರದ ಖಾಸಗಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ನಿವೃತ್ತ ಜಿಲ್ಲಾಧಿಕಾರಿ ಎ.ಬಿ ಇಬ್ರಾಹೀಂ ಆಯ್ಕೆಗೊಂಡರೆ, ಕಾರ್ಯಾಧ್ಯಕ್ಷರಾಗಿ ಡಾ.ಕೃಷ್ಣಪ್ಪ ಕೊಂಚಾಡಿ, ಅಧ್ಯಕ್ಷರಾಗಿ ಮುನೀರ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಬಜಾಲ್, ಸಂಘಟನಾ ಕಾರ್ಯದರ್ಶಿಯಾಗಿ ಸುನೀಲ್ ಕುಮಾರ್ ಬಜಾಲ್, ಕೋಶಾಧಿಕಾರಿಯಾಗಿ ಬಿ.ಕೆ.ಇಮ್ತಿಯಾಝ್ ಸರ್ವಾನುಮತದಿಂದ ಆಯ್ಕೆಗೊಂಡರು.
ಸಮ್ಮೇಳನದ ಯಶಸ್ವಿಗಾಗಿ ಜಿಲ್ಲೆಯ 300ರಷ್ಟು ಸಾಹಿತಿಗಳು, ಬುದ್ಧಿಜೀವಿಗಳು, ಬರಹಗಾರರು, ಎಲ್ಲಾ ಕ್ಷೇತ್ರಗಳ ಸಾಧಕರು, ಉದ್ಯಮಿಗಳು, ಜನಪರ ಚಿಂತಕರನ್ನೊಳಗೊಂಡ ಸ್ವಾಗತ ಸಮಿತಿಯ ಪಟ್ಟಿಯನ್ನು ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಹಿರಿಯ ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ಪ್ರೊ.ಶಿವರಾಮ್ ಶೆಟ್ಟಿ, ಪ್ರೊ.ಜೋಸ್ಲಿನ್ ಲೋಬೋ, ಡಾ.ವಸಂತ ಕುಮಾರ್, ಬಿ.ಎಂ.ಮಾಧವ, ಕೆ ಯಾದವ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಡಾ.ಕೃಷ್ಣಪ್ಪ ಕೊಂಚಾಡಿ, ಸುನೀಲ್ ಕುಮಾರ್ ಬಜಾಲ್, ವಸಂತ ಆಚಾರಿ, ಜೆ.ಬಾಲಕೃಷ್ಣ ಶೆಟ್ಟಿ, ಸಂಜೀವ ಬಳ್ಕೂರು, ಬಿ.ಎನ್.ದೇವಾಡಿಗ, ಶ್ಯಾಮ್ಸುಂದರ್ ರಾವ್, ಪ್ರಭಾಕರ್ ಕಾಪಿಕಾಡ್, ವಾಸುದೇವ ಉಚ್ಚಿಲ, ಯೋಗೀಶ್ ನಾಯಕ್, ಬಿ.ಎಂ.ಭಟ್, ಪ್ಲೇವಿ ಕ್ರಾಸ್ತಾ ಅತ್ತಾವರ, ಮರ್ಲಿನ್ ರೇಗೋ, ಡಯಾನಾ ಡಿಸೋಜ ಪ್ಲೋರಿನ್ ಡಿಸೋಜ, ಸಿಲ್ವಿಯಾ ಸಿಕ್ವೇರ, ಮೆಲ್ವಿನ್ ಪಾಯಸ್, ಎನ್ ಇ ಮುಹಮ್ಮದ್, ಅಹ್ಮದ್ ಸಾಲಿ ಬಜ್ಪೆ, ಸುನಂದಾ ಕೊಂಚಾಡಿ, ತಾರನಾಥ್ ಗಟ್ಟಿ ಕಾಪಿಕಾಡ್, ಸುರೇಶ್ ಭಂಡಾರಿ, ಪುರುಷೋತ್ತಮ ಪೂಜಾರಿ, ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ, ಭಾರತಿ ಬೋಳಾರ, ರೇವಂತ್ ಕದ್ರಿ, ವಿನೀತ್ ದೇವಾಡಿಗ, ವಿನುಶ ರಮಣ ಭಟ್ ಮುಂತಾದವರು ಉಪಸ್ಥಿತರಿದ್ದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.







