ಫೆ.25: ಧಾರವಾಡದಲ್ಲಿ ‘ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್’ ಪ್ರದರ್ಶನ
ಮಂಗಳೂರು:ಮಂಗಳೂರಿನ ಪ್ರತಿಷ್ಠಿತ ಕಲಾ ಸಂಸ್ಥೆ ಕಲಾಭಿ ಥಿಯೇಟರ್‌ನ ‘ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್’ ಎಂಬ ಶ್ರವಣ್ ಹೆಗ್ಗೋಡು ಅವರ ನಿರ್ದೇಶನದ ನಾಟಕವು ಧಾರವಾಡದಲ್ಲಿ ನಡೆಯಲಿರುವ ನಿರ್ದಿಗಂತ ರಂಗೋತ್ಸವ ಫೆ.25ರಂದು ಮಧ್ಯಾಹ್ನ 12ಗಂಟೆಗೆ ಪ್ರದರ್ಶನಗೊಳ್ಳಲಿದೆ.
ಈ ನಾಟಕೋತ್ಸವವು ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ನೇತೃತ್ವದ ನಿರ್ದಿಗಂತ ರಂಗ ಸಂಸ್ಥೆಯಿಂದ ಆಯೋಜಿಸಲಾಗಿದೆ.
ಈ ನಾಟಕವು ಈಗಾಗಲೇ ಭಾರತ್ ರಂಗ್ ಮಹೋತ್ಸವ, ಬಹುರೂಪಿ ಮುಂತಾದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ. ಇದರಲ್ಲಿನ ಬುನ್ರಾಕು ಮಾದರಿಯ ನೈಜ್ಯ ಗಾತ್ರದ ಆನೆ ಭಾರಿ ಪ್ರಶಂಸೆ ಪಡೆದಿದೆ ಎಂದು ಕಲಾಭಿ(ರಿ) ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ವರ್ಕಾಡಿ ಅವರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.
Next Story