ಫೆ.25: ಬಿ.ಸಿ.ರೋಡ್ ನಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ

ಸಾಂದರ್ಭಿಕ ಚಿತ್ರ
ಬಂಟ್ವಾಳ: ಸ್ವಾಮಿ ಕೊರಗಜ್ಜ ಬಂಟ್ವಾಳ ಹಾಗೂ ಸೈಫ್ ಅಕಾಡಮಿ, ಬಿ.ಸಿ.ರೋಡ್ ಇದರ ವತಿಯಿಂದ ಅಮೆಚೂರು ಕಬಡ್ಡಿ ಅಸೋಸಿಯೇಶನ್ ದ.ಕ. ಜಲ್ಲೆ ಮತ್ತು ಬಂಟ್ವಾಳ ತಾಲೂಕು ಇವರ ಸಹಯೋಗದಲ್ಲಿ ಹೊನಲುಬೆಳಕಿನ 65 ಕೆ.ಜಿ. ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಫೆ.25ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ.
ಪಂದ್ಯಾಟವನ್ನು ರೊಟೇರಿಯನ್ ಮಂಜುನಾಥ್ ಆಚಾರ್ಯ ಉದ್ಘಾಟಿಸಲಿದ್ದು, ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ರಾಕೇಶ್ ಮಲ್ಲಿ ಅಧ್ಯಕ್ಷತೆ ವಹಿಸುವರು. ಅಲ್ಲದೆ ಹಲವಾರು ರಾಜಕೀಯ, ಸಾಮಾಜಿಕ ಗಣ್ಯರು ಭಾಗವಹಿಸಲಿದ್ದಾರೆ.
ಇದೇ ವೇಳೆ ಕಬಡ್ಡಿ ಕ್ಷೇತ್ರದ ಸಾಧಕರಾದ ಇಬ್ರಾಹೀಂ ಬಶೀರ್ ಕದ್ಕಾರ್, ಆಕಾಶ್ ಶೆಟ್ಟಿ, ಮಿತಿನ್ ಗೌಡ, ಸುಶಾಂತ್ ಶೆಟ್ಟಿ, ನಾಸಿರ್ ಅಮ್ಮಿ, ರವಿ ಭಟ್ಕಳ, ರೈಫಾನ್, ರಿಯಾನ ಡಿಸೋಜರನ್ನು ಸನ್ಮಾನಿಸಲಾಗುವುದು ಎಂದು ಸೈಫ್ ಅಕಾಡಮಿಯ ಪ್ರಕಟನೆ ತಿಳಿಸಿದೆ.
Next Story





