ಜ.26: ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ಮಂಗಳೂರು: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜ.26ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 9ಕ್ಕೆ ನಗರದ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಗಣರಾಜ್ಯೋತ್ಸವ ದಿನಾಚರಣೆ, ಪೂ.11ಕ್ಕೆ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಅಂಕೋಲಾಜಿ ವಿಭಾಗದ ಉದ್ಘಾಟನೆ, ಅಪರಾಹ್ನ 3:30ಕ್ಕೆ ದೇರಳಕಟ್ಟೆ ಯಲ್ಲಿ ಜುಲೇಖಾ ಇನ್ಸಿಟ್ಯೂಟ್ ಆಫ್ ಆಂಕೋಲಾಜಿ ಇನ್ ಕ್ಯೂಬೇಷನ್ ಸೆಂಟರ್ ಉದ್ಘಾಟನೆ, ಸಂಜೆ 4:30ಕ್ಕೆ ದೇರಳಕಟ್ಟೆ ಯಲ್ಲಿ ಮಂಗಳೂರು ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ನೂತನ ಕಾಲೇಜು ಕಟ್ಟಡ ಉದ್ಘಾಟನೆ, 5:30ಕ್ಕೆ ನಾಟೆಕಲ್‌ನಲ್ಲಿ ಯೆನೆಪೊಯ ಆಯೋಜಿಸಿರುವ ಬಸ್ ತಂಗುದಾಣ ಮತ್ತು ಸರ್ಕಲ್ ಉದ್ಘಾಟನೆ, 6:30ಕ್ಕೆ ಕುಂಪಲದಲ್ಲಿ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ರಾತ್ರಿ 8:15ಕ್ಕೆ ವಿಮಾನದ ಮೂಲಕ ಸಚಿವರು ಬೆಂಗಳೂರಿಗೆ ತೆರಳುವರು ಎಂದು ಪ್ರಕಟನೆ ತಿಳಿಸಿದೆ.
Next Story





