ಜ.26ರಂದು ತಣ್ಣೀರುಬಾವಿ ಬೀಚ್‌ನಲ್ಲಿ ರಾಷ್ಟ್ರ ಮಟ್ಟದ ಈಜು ಸ್ಪರ್ಧೆ

ಮಂಗಳೂರು: ಮಂಗಳೂರು ಸರ್ಫ್‌ಕ್ಲಬ್‌ನ ಆಶ್ರಯದಲ್ಲಿ ಜ.೨೬ರಂದು ಸರ್ಫ್ ಕ್ಲಬ್ ಬೀಚ್‌ನಲ್ಲಿ ( ತಣ್ಣೀರು ಬಾವಿ ಬೀಚ್-1)ನಲ್ಲಿ ರಾಷ್ಟ್ರಮಟ್ಟದ ಈಜು ಸ್ಪರ್ಧೆ ನಡೆಯಲಿದೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಮಂಗಳೂರು ಸರ್ಫ್‌ಕ್ಲಬ್‌ನ ಅಧ್ಯಕ್ಷ ಚಿರಾಗ್ ಶಂಭು ಅವರು 10 ರಾಜ್ಯಗಳ ಈಜು ಪಟುಗಳು ಭಾಗವಹಿಸಲಿದ್ದಾರೆ.ಈಗಾಗಲೇ 215 ಮಂದಿ ಈಗಾಗಲೇ ನೊಂದಾಯಿಸಿಕೊಂಡಿದ್ದಾರೆ ಎಂದು ನುಡಿದರು.
ಕಳೆದ ವರ್ಷಕ್ಕಿಂತ ಈ ವರ್ಷ ಸ್ಪರ್ಧಿಗಳ ಸಂಖ್ಯೆ ಎರಡು ಪಟ್ಟು ಜಾಸ್ತಿಯಾಗಿದೆ. ಕಳೆದ ವರ್ಷ 110 ಮಂದಿ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.
ಸಮುದ್ರದಲ್ಲಿ 6 ವಿಭಾಗಗಳಲ್ಲಿ ಈಜು ಸ್ಪರ್ಧೆ ನಡೆಯಲಿದೆ. ಈ ಬಾರಿ 6 ಕಿ.ಮೀ. ವಿಭಾಗ ಸ್ಪರ್ಧೆಯು ಸೇರ್ಪಡೆಯಾಗಿದೆ. ಕಳೆದ ಬಾರಿ 3 ಕಿ.ಮೀ ಹೆಚ್ಚು ದೂರದ ಸ್ಪರ್ಧೆಯಾಗಿತ್ತು. ಸ್ಪರ್ಧೆಗೆ ಇಂಡಿಯನ್ ಕೋಸ್ಟ್ ಗಾರ್ಡ್‌ನ ಕರ್ನಲ್ ಬಿಂದ್ರಾ ಚಾಲನೆ ನೀಡಲಿರುವರು. ಡಿಐಜಿ ಪಿ.ಕೆ. ಮಿಶ್ರಾ, ಮಾಜಿ ಒಲಿಂಪಿಯನ್ ಗಗನ್ , ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ಮಂಗಳೂರು ನಗರದ ಉತ್ತರ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಮೂಕ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಂಗಳೂರು ಸರ್ಫ್ ಕ್ಲಬ್‌ನ ಮಾಜಿ ಅಧ್ಯಕ್ಷ ಮಿಥುನ್ ಭಟ್, ನಿರ್ದೇಶಕ ರಿಷಭ್‌ರಾಜ್ ಶೆಟ್ಟಿ, ಕೋಸ್ಟ್ ಗಾರ್ಡ್‌ನ ಯಶ್ ಸಿನೋಯಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







