ಸೆ.28: ಉಳ್ಳಾಲ ದರ್ಗಾ ಸಮಿತಿಯಿಂದ ಮೀಲಾದ್ ಸ್ವಲಾತ್ ಮೆರವಣಿಗೆ
ಉಳ್ಳಾಲ, ಸೆ.27: ಪ್ರವಾದಿ ಮುಹಮ್ಮದ್ ಮುಸ್ತಫ (ಸ.) ಅವರ ಜನ್ಮದಿನ ಪ್ರಯುಕ್ತ ಪ್ರತೀ ವರ್ಷದಂತೆ ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ಸಮಿತಿ ವತಿಯಿಂದ ಸೆ.28ರಂದು ಬೆಳಗ್ಗೆ 8ಕ್ಕೆ ಕೋಟೆಪುರ ಜುಮಾ ಮಸೀದಿಯಿಂದ ಮೀಲಾದ್ ಸ್ವಲಾತ್ ಮೆರವಣಿಗೆ ನಡೆಯಲಿದೆ.
ಉಳ್ಳಾಲ ದರ್ಗಾ ಅಧೀನದ 32 ಮಸೀದಿ ಮತ್ತು ಮದ್ರಸ ವಿದ್ಯಾರ್ಥಿಗಳು, ಊರ ನಾಗರಿಕರು, ದರ್ಗಾ ಸಮಿತಿ ಸದಸ್ಯರು, ಮೊಹಲ್ಲಾ ಸಮಿತಿ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸುವರು. ಮೆರವಣಿಗೆಯು ಕೋಟೆಪುರ-ಅಬ್ಬಕ್ಕ ಸರ್ಕಲ್-ಮುಕ್ಕಚ್ಚೇರಿ-ಆಝಾದ್ ನಗರವಾಗಿ ಉಳ್ಳಾಲ ದರ್ಗಾದಲ್ಲಿ ಸಮಾಪನಗೊಳ್ಳಲಿದೆ ಎಂದು ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story