ಜ.28ರಿಂದ ನಂದಾವರ ದರ್ಗಾ ಶರೀಫ್ ಉರೂಸ್
ಬಂಟ್ವಾಳ : ಪಾಣೆಮಂಗಳೂರು ಸಮೀಪದ ನಂದಾವರ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಜ.28 ರಿಂದ ಫೆ.1ರ ತನಕ ನಡೆಯಲಿದೆ.
ಜ. 28 ರಂದು ಅಸರ್ ನಮಾಜಿನ ಬಳಿಕ ಧ್ವಜಾರೋಹಣ, ಮಜ್ಲಿಸುನ್ನೂರು, ಪ್ರಾರ್ಥನಾ ಸಂಗಮ, ಜ.29 ರಂದು ಕಥಾ ಪ್ರಸಂಗ, 30 ರಂದು ಇಸ್ಕ್ ಮಜ್ಲಿಸ್, 31 ರಂದು ಸಂಶುಲ್ ಉಲಮಾ ಆಂಡ್ ನೇರ್ಚೆ, ಫೆ. 1 ರಂದು ಸಂದಲ್ ಮೆರವಣಿಗೆ, ಪ್ರಾರ್ಥನಾ ಸಂಗಮ ಹಾಗೂ ಅನ್ನದಾನ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
Next Story





