ಫೆ.28: ದೇರಳಕಟ್ಟೆ ನವೀಕೃತ ಜುಮಾ ಮಸೀದಿ ಉದ್ಘಾಟನೆ

ದೇರಳಕಟ್ಟೆ, ಫೆ.27: ಬದ್ರಿಯಾ ಜುಮಾ ಮಸ್ಜಿದ್‌ನ ವಿಸ್ತೃತ ಮತ್ತು ನವೀಕೃತ ಮಸೀದಿ ಕಟ್ಟಡದ ಉದ್ಘಾಟನೆ ಹಾಗೂ ವಕ್ಫ್ ನಿರ್ವಹಣೆ ಕಾರ್ಯಕ್ರಮವು ಫೆ.28ರ ಮಧ್ಯಾಹ್ನ 12ಕ್ಕೆ ನಡೆಯಲಿದೆ.
ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಳ್ ಮಸೀದಿ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಕೆ.ಎಸ್. ಅಟಕೋಯ ಕುಂಬೋಳ್ ತಂಳ್ ದುಆಗೈಯಲಿದ್ದಾರೆ. ದ.ಕ.ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಮಸೀದಿಯ ವಕ್ಫ್ ಮಾಡಲಿದ್ದಾರೆ.
ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಆರ್.ಅಹ್ಮದ್ ಶೇಟ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ವೀಕರ್ ಯು.ಟಿ. ಖಾದರ್, ಸಯ್ಯದ್ ಅಮೀರ್ ತಂಙಳ್, ಇರ್ಷಾದ್ ದಾರಿಮಿ ಮಿತ್ತಬೈಲ್ ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ರಶೀದ್ ಡಿ.ಎಂ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





