ಫೆ.28: ವಕ್ಫ್ ಸಂರಕ್ಷಣಾ ರ್ಯಾಲಿ-ಪ್ರತಿಭಟನೆ

ಮಂಗಳೂರು,ಫೆ.27: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಫೆ.28ರ ಅಪರಾಹ್ನ ನಗರದಲ್ಲಿ ವಕ್ಫ್ ಸಂರಕ್ಷಣಾ ರ್ಯಾಲಿ ಮತ್ತು ಪ್ರತಿಭಟನೆ ನಡೆಯಲಿದೆ.
ಅಪರಾಹ್ನ 3ಕ್ಕೆ ನಗರದ ಜ್ಯೋತಿ (ಅಂಬೇಡ್ಕರ್ ವೃತ್ತ)ಯಿಂದ ರ್ಯಾಲಿ ಆರಂಭಗೊಳ್ಳಲಿದ್ದು, ಕ್ಲಾಕ್ ಟವರ್ ಬಳಿ ಸಮಾಪ್ತಿಗೊಳ್ಳಲಿದೆ ಎಂದು ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





