ಫೆ.28ರಂದು ರಿಟೇಲ್ ಎಕ್ಸ್ ಪೋ ‘ರಿಟೈಲಥಾನ್ 2024’

ಮಂಗಳೂರು: ಯೂನಿಯನ್ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಕಚೇರಿ ವತಿಯಿಂದ ಮೆಗಾ ರಿಟೇಲ್ ಎಕ್ಸ್ ಪೋ ‘ರಿಟೈಲಥಾನ್ 2024’ ಫೆ.28ರಂದು ಬೆಳಗ್ಗೆ 10ರಿಂದ ರಾತ್ರಿ 7ರ ವರೆಗೆ ಮಂಗಳೂರಿನ ಎಂ.ಜಿ. ರಸ್ತೆಯ ಟಿ.ಎಂ.ಎ.ಪೈ ಸಭಾಂಗಣದಲ್ಲಿ ನಡೆಯಲಿದೆ.
ಬ್ಯಾಂಕ್‌ನ ವಲಯ ಮುಖ್ಯಸ್ಥೆ ರೇಣು ನಾಯರ್ ಎಕ್ಸ್ ಪೋ ಉದ್ಘಾಟಿಸಲಿರುವರು. ಗೃಹ ನಿರ್ಮಾಣ ಸಂಸ್ಥೆಗಳು, ಕಾರು ಮಾರಾಟ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಲಹೆಗಾರ ಸಂಸ್ಥೆಗಳು ರಿಟೈಲಥಾನ್‌ನಲ್ಲಿ ಭಾಗವಹಿಸಲಿವೆ ಎಂದು ಬ್ಯಾಂಕ್‌ನ ಪ್ರಾದೇಶಿಕ ಮುಖ್ಯಸ್ಥ ಮಹೇಶ್ ಜೆ. ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರಿನ 20ಕ್ಕೂ ಅಧಿಕ ಮುಂಚೂಣಿ ಗೃಹ ನಿರ್ಮಾಣ ಸಂಸ್ಥೆಗಳು, 50ಕ್ಕೂ ಅಧಿಕ ಯೋಜನೆಗಳ ಸಾಮಾನ್ಯ ಮತ್ತು ಐಷಾರಾಮಿ 3,000ಕ್ಕೂ ಅಧಿಕ ಫ್ಲ್ಯಾಟ್‌ಗಳು ಗ್ರಾಹಕರಿಗಾಗಿ ಲಭ್ಯವಿದೆ ಎಂದರು.
ಎಕ್ಸ್‌ಪೋದಲ್ಲಿ ಯೂನಿಯನ್ ಬ್ಯಾಂಕ್‌ನಿಂದ ಗೃಹಸಾಲ ಶೇ.8.30 ಬಡ್ಡಿ ದರರಷ್ಟಿದ್ದು, ವಾಹನ ಸಾಲ ಬಡ್ಡಿದರ ಶೇ.8.70ರಿಂದ ಆರಂಭವಾಗಲಿದೆ. ಶಿಕ್ಷಣ ಸಾಲ 40 ಲಕ್ಷ ರೂ.ವರೆಗೆ ದೊರೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡೆಪ್ಯುಟಿ ರೀಜನಲ್ ಹೆಡ್ ಖುರೇಷಿ, ರಿಟೇಲ್ ಲೋನ್ ಹೆಡ್ ಸುಮಾ, ಅಧಿಕಾರಿಗಳಾದ ಸಂಜ್ಯೋತ್ ಮತ್ತು ವಿಜಯ ಸಿಂಹ ರೆಡ್ಡಿ ಉಪಸ್ಥಿತರಿದ್ದರು







