ಅ.29: ತುಳು ಸಾಹಿತ್ಯ, ಸಾಂಸ್ಕ್ರತಿಕ ಬದುಕು-ವಿಚಾರ ಮಂಥನ
ಮಂಗಳೂರು,ಅ.27: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ವಿವಿಯ ಕೂಳೂರು ಕ್ಯಾಂಪಸ್‌ನಲ್ಲಿ ’ತುಳು ಸಾಹಿತ್ಯ, ಸಾಂಸ್ಕೃತಿಕ ಬದುಕು’ ಎಂಬ ವಿಷಯದ ಬಗ್ಗೆ ಅ.29ರಂದು ದಿನದ ವಿಚಾರ ಮಂಥನ ನಡೆಯಲಿದೆ.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಅಧ್ಯಕ್ಷ ಡಾ. ತುಕುರಾಮ ಪೂಜಾರಿ ದಿಕ್ಸೂಚಿ ಭಾಷಣ ಮಾಡುವರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಜೀವನ್ ರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅಕಾಡಮಿಯ ಅದ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ಉದ್ಘಾಟಿಸುವರು.
ಪ್ರಥಮ ಗೋಷ್ಠಿಯಲ್ಲಿ ’ತುಳು ಕವಿತೆ ಮತ್ತು ಮಹಾಕಾವ್ಯ’ ವಿಷಯದ ಬಗ್ಗೆ ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ, ದ್ವಿತೀಯ ಗೋಷ್ಠಿಯಲ್ಲಿ ’ಪಾಡ್ದನಗಳ ಸಾಹಿತ್ಯಿಕ ಮೌಲ್ಯಗಳು’ ವಿಷಯದ ಬಗ್ಗೆ ಪ್ರಾಂಶುಪಾಲ ಎಂ.ಡಿ.ಮಂಚಿ, ತೃತೀಯ ಗೋಷ್ಠಿಯಲ್ಲಿ ’ತುಳು ಯಕ್ಷಗಾನ ಪ್ರಸಂಗ ಸಾಹಿತ್ಯ ಹಾಡು-ಸಂವಹನ’ ವಿಷಯದ ಬಗ್ಗೆ ಯಕ್ಷಗಾನ ಭಾಗವತ ಶಿವಪ್ರಸಾದ್ ಎಡಪದವು ವಿಚಾರ ಮಂಡಿಸುವರು. ಅಪರಾಹ್ನ 2:30ಕ್ಕೆ ಜಾನಪದ ತಜ್ಞ ಕೆ.ಕೆ. ಪೇಜಾವರ ಸಮಾರೋಪ ಭಾಷಣ ಮಾಡುವರು ಎಂದು ಪ್ರಕಟನೆ ತಿಳಿಸಿದೆ.







