3ನೇ ವೇತನ ಆಯೋಗವನ್ನು ಶೀಘ್ರವಾಗಿ ಜಾರಿಗೊಳಿಸಲು ಪ್ರಧಾನಿಗೆ ಮನವಿ

ಮಂಗಳೂರು: ಬಿಎಸ್‌ಎನ್‌ಎಲ್ ನೌಕರರ ಬಹುದಿನದ ಬೇಡಿಕೆಯಾದ 3ನೇ ವೇತನ ಆಯೋಗವನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿಯನ್ನು ಇಲಾಖೆಯ ಪಿಜಿಎಂ ನವೀನ್ ಗುಪ್ತ ಅವರ ಮೂಲಕ ಸಲ್ಲಿಸಲಾಯಿತು.
ಇದು ರಾಷ್ಟ್ರಮಟ್ಟದಲ್ಲಿ ನಡೆಯುವ ನೌಕರರ ಚಳುವಳಿ ಭಾಗವಾಗಿದ್ದು, ಈ ಸಂದರ್ಭ ದಕ್ಷಿಣ ಕನ್ನಡ ಎನ್‌ಎಫ್ಟಿ ಬಿಎಸ್‌ಎನ್‌ಎಲ್ ಯೂನಿಯನ್ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Next Story





