ಜ.30 ರಂದು ಸಜೀಪ ಪಡು ನವೀಕೃತ ಮಸೀದಿ ಉದ್ಘಾಟನೆ
ಎರಡು ದಿನಗಳ ಧಾರ್ಮಿಕ ಉಪನ್ಯಾಸ, ನೂರೇ ಅಜ್ಮೀರ್ ಆಧ್ಯಾತ್ಮಿಕ ಮಹಾಸಂಗಮ

ಉಳ್ಳಾಲ:ಬದ್ರಿಯಾ ಜುಮಾ ಮಸೀದಿ, ತಲೆಮೊಗರು ಸಜೀಪ ಪಡು ಇದರ ನವೀಕೃತ ಮಸೀದಿ ಉದ್ಘಾಟನೆ ಹಾಗೂ ಎರಡು ದಿನಗಳ ಉಪನ್ಯಾಸ ಮತ್ತು ನೂರೇ ಅಜ್ಮೀರ್ ಆಧ್ಯಾತ್ಮಿಕ ಮಹಾಸಂಗಮವು ಜ.30ರರಿಂದ ಫೆ.1 ವರೆಗೆ ನಡೆಯಲಿದ್ದು ಜ.31 ಗುರುವಾರ ಸಂಜೆ ನಾಲ್ಕು ಗಂಟೆಗೆ ನವೀಕೃತ ಮಸೀದಿ ಉದ್ಘಾಟನೆ ನಡೆಯಲಿದೆ .ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ ಎಂದು ತಲೆಮೊಗರು ಮಸೀದಿ ಖತೀಬ್ ಟಿ.ಎ.ಅಹ್ ಮದ್ ಕಬೀರ್ ಹಾಮಿದಿ ಅನ್ನುಜೂಮಿ ಹೇಳಿದರು.
ಅವರು ಬುಧವಾರ ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ದ.ಕ ಜಿಲ್ಲೆ ಖಾಝಿ ಶೈಖುನಾ ತ್ವಾಖಾ ಅಹ್ ಮದ್ ಮುಸ್ಲಿಯಾರ್ ಮಸೀದಿಯ ವಕ್ಫ್ ನಿರ್ವಹಣೆ ನಡೆಸಲಿದ್ದಾರೆ. ಸಯ್ಯದ್ ಅಶ್ರಫ್ ತಂಙಳ್ ಆದೂರು ಅಸರ್ ನಮಾಝ್ ನೇತೃತ್ವ ವಹಿಸಲಿದ್ದಾರೆ.ಅದೇ ದಿನ ರಾತ್ರಿ ಅಲಿ ಅಕ್ಬರ್ ಬಾಖವಿ ತನಿಯಪುರ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ ಎಂದರು.
ಜ 31ರ ಶುಕ್ರವಾರದಂದು ಜುಮಾ ನೇತೃತ್ವ ವನ್ನು ಸಯ್ಯದ್ ಅಬ್ದುಲ್ ರಶೀದ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ವಹಿಸಲಿದ್ದಾರೆ. ಅದೇ ದಿನ ರಾತ್ರಿ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ರಫೀಕ್ ಸಅದಿ ದೇಲಂಪಾಡಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಜ. 1ರ ಶನಿವಾರದಂದು ಸಂಜೆ 6.00ಕ್ಕೆ ಸರ್ವ ಧರ್ಮ ಸೌಹಾರ್ದ ಸಂಗಮ ನಡೆಯಲಿದ್ದು, ವಿವಿಧ ಧರ್ಮಗಳ ಧಾರ್ಮಿಕ ಗುರುಗಳು, ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ. ಅದೇ ದಿನ ರಾತ್ರಿ ನೂರೇ ಅಜ್ಮೀರ್ ಕಾರ್ಯ ಕ್ರಮ ನಡೆಯಲಿದೆ ಎಂದು ಅವರು ಹೇಳಿದರು
ಸುದ್ದಿ ಗೋಷ್ಠಿ ಯಲ್ಲಿ ಮದರಸ ಮತ್ತು ಜಮಾಅತ್ ಸಮಿತಿ ಅಧ್ಯಕ್ಷ ಝುಬೈರ್ ತಲೆಮೊಗರು, ನವೀಕೃತ ಮಸೀದಿ ಕಟ್ಟಡ ಸಮಿತಿ ಯ ಅಧ್ಯಕ್ಷ ತಲ್ಹತ್ ಹಳ್ಳವಡೆ , ಎಚ್. ಐ.ಎಂ ತಲೆಮೊಗರು ಪ್ರ.ಕಾರ್ಯದರ್ಶಿ ರಹೀಂ ಎನ್. ಎಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.