ಸೆ.30: ಮೇಲ್ತೆನೆಯ ಪತ್ತನೆ ವರ್ಸತ್ತೆ ಜಲ್ಸ್ ಕಾರ್ಯಕ್ರಮ

ದೇರಳಕಟ್ಟೆ, ಸೆ.23: ಬ್ಯಾರಿ ಎಲ್ತ್‌ಕಾರ್-ಕಲಾವಿದಮಾರೊ ಕೂಟ (ಮೇಲ್ತೆನೆ)ದ ದಶಮಾನೋತ್ಸವ (ಪತ್ತನೆ ವರ್ಸತ್ತೆ ಜಲ್ಸ್-2025) ಕಾರ್ಯಕ್ರಮವು ಸೆ.30ರಂದು ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 9:30ಕ್ಕೆ ಮೇಲ್ತೆನೆಯ ಅಧ್ಯಕ್ಷ ವಿ. ಇಬ್ರಾಹೀಂ ನಡುಪದವು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಉದ್ಘಾಟಿಸಲಿದ್ದಾರೆ.
ಮೇಲ್ತೆನೆ ಪ್ರಕಟಿಸಿದ ಮೇಲ್ತೆನೆಲ್ ಬಿರಿಂಞೆ ಪೂವುಙ ಕವನ ಸಂಕಲನವನ್ನು ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು. ಎಚ್. ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಬ್ದುಲ್ ರಹ್ಮಾನ್ ಕಣಚೂರು, ಡಾ. ಅಬೂಬಕರ್ ಸಿದ್ದೀಕ್, ಶಾಹಿದಾ ಬಾನು, ಬಿ.ಜಿ. ಹನೀಫ್ ಹಾಜಿ, ಮುಹಮ್ಮದ್ ಅಲಿ ಕಮ್ಮರಡಿ, ಬಶೀರ್ ಬೈಕಂಪಾಡಿ, ಅಬೂಬಕರ್ ಹಾಜಿ ನಾಟೆಕಲ್, ಹಾಜಿ ಕೆ.ಕೆ. ಅಬ್ದುನ್ನಾಸರ್, ಹಾಜಿ ಮುಹಮ್ಮದ್ ತ್ವಾಹ, ನಝೀರ್ ಉಳ್ಳಾಲ್, ಇಬ್ರಾಹೀಂ ಹಾಜಿ ಕತರ್, ಸಿದ್ದೀಕ್ ದೇರಳಕಟ್ಟೆ, ಹಾಜಿ ಎನ್. ಎಸ್. ಕರೀಂ, ಹಾಜಿ ಯೂಸುಫ್ ಬಾವ, ಆಸೀಫ್ ಮಾಳಿಗೆ, ಎಚ್.ಕೆ. ಖಾದರ್ ಹಾಜಿ ಉಳ್ಳಾಲ, ಮುಹಮ್ಮದ್ ಅಶ್ರಫ್, ಹಮೀದ್ ಹಸನ್ ಮಾಡೂರು, ಮುಹಮ್ಮದ್ ಹನೀಫ್ ಶೈನ್, ಅಬ್ದುಲ್ ಅಝೀಝ್ ಬೈಕಂಪಾಡಿ ಭಾಗವಹಿಸಲಿದ್ದಾರೆ.
ಮಕ್ಕಳ ವಿದ್ಯಾಭ್ಯಾಸದಲ್ಲಿ ತಂದೆ-ತಾಯಿಯ ಪಾತ್ರ ಎಂಬ ವಿಷಯದಲ್ಲಿ ಪೂ.11:30ಕ್ಕೆ ನಡೆಯುವ ಚರ್ಚಾ ಗೋಷ್ಠಿಯಲ್ಲಿ ಕನೀಝಾ ಫಾತಿಮಾ, ಶಮೀಮಾ ಕುತ್ತಾರ್, ರೈಹಾನ ವಿ.ಕೆ. ಸಚೇರಿಪೇಟೆ, ರಹ್ಮತ್ ಮನ್ಸೂರ್, ಉಮೇರಾ ಬಾನು ಮತ್ತು ಶಂಶುದ್ದೀನ್ ಮಡಿಕೇರಿ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಅಬ್ದುಲ್ ರಝಾಕ್ ಅನಂತಾಡಿ, ಎ.ಕೆ. ಕುಕ್ಕಿಲ, ಹುಸೈನ್ ಕಾಟಿಪಳ್ಳ ಪಾಲ್ಗೊಳ್ಳಲಿದ್ದಾರೆ.
ಅಪರಾಹ್ನ 3 ಗಂಟೆಗೆ ನಡೆಯುವ ಕವಿಗೋಷ್ಠಿಯಲ್ಲಿ ಅಶ್ರಫ್ ಅಪೋಲೊ, ಯಂಶ ಬೇಂಗಿಲ, ಸಫ್ವಾನ್ ಸವಣೂರು, ಲುಕ್ಮಾನ್ ಅಡ್ಯಾರ್, ಸೈಫ್ ಕುತ್ತಾರ್ ಮತ್ತು ಮಿಸ್ರಿಯಾ ಪಜೀರ್, ಅಸ್ಮತ್ ವಗ್ಗ, ಫರ್ಹಾನಾ ಉಳ್ಳಾಲ, ಹವ್ವಾ ಬುಶ್ರ ಕಬಕ, ರಮೀಝಾ ಎಂ.ಬಿ. ಕುಕ್ಕಾಜೆ ಕವನ ವಾಚಿಸಲಿದ್ದಾರೆ.
ಸಂಜೆ 4ಕ್ಕೆ ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅವರ ಅಧ್ಯಕ್ಷತೆ ಮತ್ತು ಸ್ಪೀಕರ್ ಯು.ಟಿ.ಖಾದರ್‌ರ ಗೌರವ ಉಪಸ್ಥಿತಿಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಹಿರಿಯ ಗಾಯಕ ರಹೀಂ ಬಿ.ಸಿ.ರೋಡ್ ಅವರಿಗೆ ರಾಜ್ಯ ಅಲೈಡ್ ಆಂಡ್ ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಯು.ಟಿ. ಇಫ್ತಿಕಾರ್ ಅಲಿ ಮೇಲ್ತೆನೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಹಾಜಿ ಯು.ಕೆ. ಮೋನು ಕಣಚೂರು, ಅಬ್ದುಲ್ ಅಝೀಝ್ (ಮೈಸೂರು ಬಾವ), ಹಾಜಿ ಇಬ್ರಾಹೀಂ ಕೋಡಿಜಾಲ್, ಹಾಜಿ ಟಿ.ಎಸ್. ಅಬ್ದುಲ್ಲಾ ಸಾಮಣಿಗೆ, ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್, ಮುಹಮ್ಮದ್ ಅಲಿ ಉಚ್ಚಿಲ್, ಹೈದರ್ ಪರ್ತಿಪ್ಪಾಡಿ, ಎಸ್.ಕೆ. ಅಬ್ದುಲ್ ಖಾದರ್ ಹಾಜಿ ಮುಡಿಪು, ಶಿಹಾಬ್ ಕಲಂದರ್ ಮುಡಿಪು, ಹಾಜಿ ಎನ್.ಎಸ್. ನಾಸಿರ್, ನಝರ್ ಷಾ ಪಟ್ಟೋರಿ, ಸಿ.ಎಂ. ಫಾರೂಕ್ ಬೆಳ್ಮ, ಹಾಜಿ ಟಿ.ಆರ್. ಅಬ್ದುಲ್ ಖಾದರ್, ನವಾಝ್ ನರಿಂಗಾನ, ಜಲೀಲ್ ಮೋಂಟುಗೋಳಿ, ಮುಹಮ್ಮದ್ ಲಿಬ್ಝತ್, ಯು.ಎಚ್. ಖಾಲಿದ್ ಉಜಿರೆ, ಅಬ್ದುಲ್ ರಝಾಕ್ ಇಂಜಿನಿಯರ್ ದುಬೈ, ಹೈದರ್ ಕೈರಂಗಳ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮೆಹಂದಿ, ಆಶು ಕವನ ಮತ್ತು ಮಕ್ಕಳಿಗೆ ವಿಶೇಷ ಸ್ಪರ್ಧೆ ನಡೆಯಲಿದೆ. ಅಲ್ಲದೆ 2024-25ನೆ ಸಾಲಿನ ಎಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉಳ್ಳಾಲ ತಾಲೂಕು ಮಟ್ಟದಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಗುವುದು ಎಂದು ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







