Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಜ.31ರಂದು 'ಮಿಡ್ಲ್ ಕ್ಲಾಸ್ ಫ್ಯಾಮಿಲಿ'...

ಜ.31ರಂದು 'ಮಿಡ್ಲ್ ಕ್ಲಾಸ್ ಫ್ಯಾಮಿಲಿ' ತುಳು ಸಿನಿಮಾ ತೆರೆಗೆ

ಚಲನಚಿತ್ರ ವೀಕ್ಷಕರಿಗೆ ರೋಹನ್ ಕಾರ್ಪೊರೇಷನ್ ನಿಂದ ವಿಶೇಷ ಕೊಡುಗೆ

ವಾರ್ತಾಭಾರತಿವಾರ್ತಾಭಾರತಿ28 Jan 2025 8:47 PM IST
share
ಜ.31ರಂದು ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಸಿನಿಮಾ ತೆರೆಗೆ

ಮಂಗಳೂರು: ನಾನು ಮಿಡ್ಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದವ ಇಡೀ ಚಲನಚಿತ್ರ ಉತ್ತಮವಾಗಿ ಮೂಡಿಬಂದಿದೆ. ಜನರಿಗೆ ಮನೋರಂಜನೆ ನೀಡುವಲ್ಲಿ ಒಂದು ಉತ್ತಮ ಚಲನಚಿತ್ರ. ಈ ಚಲನ ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಎರಡು ವಾರದ ಒಳಗೆ ಟಿಕೆಟ್ ದಾಖಲೆ ತೋರಿಸುವವರಿಗೆ ರೋಹನ್ ಕಾರ್ಪೊರೇ ಷನ್ ಪ್ರೊಜೆಕ್ಟ್ ಬುಕ್ ಮಾಡುವವರಿಗೆ ಶೇ 10 ವಿನಾಯಿತಿ ನೀಡಲಾಗುವುದು ಎಂದು ಚಲನ ಚಿತ್ರವನ್ನು ಅರ್ಪಿಸುತ್ತಿರುವ ರೋಹನ್ ಕಾರ್ಪೊರೇ ಷನ್'ನ ಎಂ.ಡಿ ಹಾಗೂ ಚೇರ್ ಮ್ಯಾನ್ ರೋಹನ್ ಮೊಂತೆರೊ ಮಂಗಳವಾರ ಸುದ್ದಿ ಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಥಿಯೇಟರ್ ಗೆ ಬಂದು ಚಲನಚಿತ್ರ ವೀಕ್ಷಿಸುವವರಿಗೆ ಮನಸ್ಸಿಗೆ ಖುಷಿ ನೀಡುವ ಚಲನಚಿತ್ರ 'ಮಿಡ್ಲ್ ಕ್ಲಾಸ್ ಫ್ಯಾಮಿಲಿ' ಜನರ ಮನ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ರೋಹನ್ ಮೊಂತೆರೊ ತಿಳಿಸಿದ್ದಾರೆ.

ಚಲನಚಿತ್ರದ ನಿರ್ದೇಶಕ ಮಾತನಾಡುತ್ತಾ, ರೋಹನ್ ಕಾರ್ಪೊರೇ ಷನ್'ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಸೆಂಟ್ ಪ್ರೊಡಕ್ಷನ್, ಎಚ್.ಪಿ. ಆರ್ ಫಿಲ್ಡ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ್‌ ಎನ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ 'ಮಿಡ್ಸ್ ಕ್ಲಾಸ್ ಫ್ಯಾಮಿಲಿ' ತುಳು ಸಿನಿಮಾ ಜನವರಿ 31 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಮಂಗಳೂರಿನರೂಪವಾಣಿ, ಭಾರತ್ ಮಾಲ್'ನ ಬಿಗ್ ಸಿನಿಮಾಸ್, ಪಿವಿಆರ್,ಸಿನಿಪೊಲಿಸ್, ಭಾರತ್ ಸಿನಿಮಾಸ್ ದೇರಳಕಟ್ಟೆ, ಪುತ್ತೂರು, ಪಡುಬಿದ್ರೆ, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ ಮೊದಲಾದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದವರು ತಿಳಿಸಿದ್ದಾರೆ ‌

ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್' ತಂಡದ ಬಹುತೇಕ ತಂತ್ರಜ್ಞರು, ಕಲಾವಿದರು ಇಲ್ಲಿ ದುಡಿದಿದ್ದಾರೆ. ಮುಖ್ಯವಾಗಿ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾದ ನಿರ್ದೇಶಕ ರಾಹುಲ್ ಅಮೀನ್ ಇಲ್ಲೂ ನಿರ್ದೇಶಕರಾಗಿದ್ದಾರೆ. ವಿನೀತ್ ಕುಮಾರ್ ನಾಯಕ ನಟನಾಗಿ ಸಮತಾ ಅಮೀನ್ ನಾಯಕಿಯಾಗಿ ಹಾಗೂ ತುಳು ಚಿತ್ರರಂಗದ ಮೇರು ಕಲಾವಿದರಾದ ನವೀನ್ ಡಿ.ಪಡೀಲ್,ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಚೈತ್ರಾ ಶೆಟ್ಟಿ(ಚಿ೦ಪು), ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಮೈಮ್ ರಾಮದಾಸ್, ರೂಪ ವರ್ಕಾಡಿ, ರವಿ ರಾಮಕುಂಜ, ಶೋಭಾ ರೈ, ಶರಣ್ ಚಿಲಿಂಬಿ, ಸಾಹಿಲ್ ರೈ ಹಾಗೂ ಗೌರವ ಪಾತ್ರದಲ್ಲಿ ನವನೀತ್ ಶೆಟ್ಟಿ ಕದ್ರಿಯವರು ಅಭಿನಯಿಸಿ ದ್ದಾರೆ. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ಛಾಯಾಗ್ರಾಹಕರಾಗಿ ವಿಷ್ಣು ಪ್ರಸಾದ್. ಪಿ, ಸಂಕಲನ ವಿಶಾಲ್ ದೇವಾಡಿಗ, ಡಿ.ಐ ಮತ್ತು ವರ್ಣ ಪ್ರಜ್ವಲ್ ಸುವರ್ಣ, ವಸ್ತ್ರ ವಿನ್ಯಾಸ ವರ್ಷ ಆಚಾರ್ಯ, ಡಿಜಿಟಲ್ ಮಾರ್ಕೆಟಿಂಗ್ ಆಯುಷ್ಮಾನ್ ಹಾಗೂ ನವೀನ್ ಕುಮಾ‌ರ್ ಶೆಟ್ಟಿ ಮತ್ತು ವಿನಾಯಕ ಆಚಾರ್ಯ ನೃತ್ಯ ಸಂಯೋಜಿಸಿದ್ದಾರೆ.ಪವನ್ ಕುಮಾ‌ರ್,ನಿತಿನ್ ರಾಜ್ ಶೆಟ್ಟಿ, ಸುಹಾನ್ ಪ್ರಸಾದ್, ಭರತ್ ಕುಮಾರ್ ಗಟ್ಟಿ, ಗಣೇಶ್ ಕೊಲ್ಯ, ಅಶ್ವಿನಿ ರಕ್ಷಿತ್, ಕ್ಷಿತಿಂದ್ರ ಕೋಟೆಕಾರ್, ಮಿತ್ರಂಪಾಡಿ ಜಯರಾಮ್ ರೈ, ಕಿರಣ್ ಶೆಟ್ಟಿ, ಸ್ವಸ್ತಿಕ್ ಆಚಾರ್ಯ ಸಹ ನಿರ್ಮಾಪಕರಾಗಿದ್ದಾರೆ. ಪ್ರೊಡಕ್ಷನ್ ಮ್ಯಾನೇಜರ್ ಕಾರ್ತಿಕ್ ರೈ ಅಡ್ಯನಡ್ಕ, ನಿತಿನ್ ಶೇರಿಗಾರ್ ಮತ್ತು ಜೀತೇಶ್‌ ಕುಮಾ‌ರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಈಗಾಗಲೇ ಈ ಚಿತ್ರವನ್ನು ಯುಎಇ ರಾಷ್ಟ್ರದಲ್ಲಿ ಮೋನಿಷ ಶರತ್ ಶೆಟ್ಟಿ, ಹರೀಶ್ ಬಂಗೇರ, ಹರೀಶ್ ಶೇರಿಗಾರ್, ಗಿರೀಶ್ ನಾರಾಯಣ್, ದೀಪಕ್ ಕುಮಾರ್ ರವರು ಅರ್ಪಿಸಲು ಮುಂದಾಗಿದ್ದು, ದುಬೈನ ಗಮ್ಮತ್ ಕಲಾವಿದರ ಪೈಕಿ 5 ಕಲಾವಿದ ರಾದ ಚಿದಾನಂದ ಪೂಜಾರಿ, ಗಿರೀಶ್ ನಾರಾಯಣ್, ಡೋನಿ ಕೊರೆಯ, ಆಶಾ ಕೊರೆಯ ಮತ್ತು ದೀಪ್ತಿ ದಿನ್ ರಾಜ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜನವರಿ 19 ರಂದು ಯುಎಇ ಯಲ್ಲಿ ದಾಖಲೆಯ 16 ಪ್ರೀಮಿಯ‌ರ್ ಶೋ ಈಗಾಗಲೇ ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದು ಪ್ರಶಂಸೆಗೆ ಪಾತ್ರವಾಗಿದೆ.

ಜನವರಿ 26 ರಂದು ರೋಹನ್ ಕಾರ್ಪೊರೇಷನ್'ನ ಎಂ.ಡಿ ಹಾಗೂ ಚೇರ್ ಮ್ಯಾನ್ ರೋಹನ್ ಮೊಂತೆರೋರವರ ನೇತೃತ್ವದಲ್ಲಿ ಮಂಗಳೂರಿನ ಭಾರತ್ ಸಿನಿಮಾಸ್ ನಲ್ಲಿ 3 ಪ್ರೀಮಿಯರ್ ಶೋ ನಡೆದಿದ್ದು, ಪ್ರೇಕ್ಷಕರ ಜನ-ಮನ ಗೆದ್ದು ಬೀಗಿದೆ. ಜನವರಿ 31 ನೇ ತಾರೀಕು ತುಳುನಾಡಿನಾದ್ಯಂತ ಹಾಗೂ ಫೆ.7 ರಂದು ಯುಎಇ ಯಲ್ಲಿ ಬಿಡುಗಡೆ ಯಾಗುತ್ತಿ ರುವುದು ಹೆಮ್ಮೆಯ ಸಂಗತಿ. 'ಮಿಡಲ್ ಕ್ಲಾಸ್ ಫ್ಯಾಮಿಲಿ' ಫೆ.2 ರಂದು ಕೆನಡಾದಲ್ಲಿ ತೆರೆಕಾಣಲಿರುವುದು.

ಸಿನಿಮಾ ಕೌಟುಂಬಿಕ ಕಥೆಯನ್ನು ಒಳಗೊಂಡಿದೆ. ಹಾಸ್ಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. 'ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್' ಸಿನಿಮಾದಂತೆ ಈ ಸಿನಿಮಾ ಕೂಡಾ ತುಳುಚಿತ್ರರಂಗದಲ್ಲಿ ದೊಡ್ಡ ಸೌಂಡ್ ಮಾಡಲಿದೆ. ಈಗಾಗಲೇ ಸಿನಿಮಾದ ಟೈಟಲ್ ಸ್ಟಾಂಗ್, ಟ್ರೇಲರ್ ಸೂಪರ್ ಹಿಟ್ ಆಗಿದೆ. ಜೊತೆಗೆ ಸಿನಿಮಾದ ನಾಯಕ ನಟ ವಿನೀತ್ ಕುಮಾರ್ ಮತ್ತು ನಾಯಕಿ ನಟಿ ಸಮತಾ ಅಮೀನ್ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಲಿದೆ ಎಂದು ನಿರ್ದೇಶಕ ರಾಹುಲ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿ ಯಲ್ಲಿ ಚಲನಚಿತ್ರ ತಂಡದ ಸದಸ್ಯರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X