ಜು.4: ದ.ಕ.ಜಿಲ್ಲೆಯಲ್ಲಿ ರೆಡ್ ಅಲರ್ಟ್

ಮಂಗಳೂರು, ಜು.3: ದ.ಕ.ಜಿಲ್ಲೆಯ ನಗರ ಪ್ರದೇಶದಲ್ಲಿ ಸಾಧಾರಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಜು.4ರಂದು ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.
ಬುಧವಾರ ರಾತ್ರಿ ಭಾರೀ ಮಳೆಯಾದ ಕಾರಣ ಸುಳ್ಯ ಹಾಗೂ ಕಡಬ ತಾಲೂಕಿನ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಸಾರಲಾಗಿತ್ತು. ಬುಧವಾರ ರಾತ್ರಿಯಿಡೀ ಮಳೆಯಾಗಿದ್ದು, ಗುರುವಾರ ಮಧ್ಯಾಹ್ನದವರೆಗೆ ಮೋಡ, ಮಳೆ ಕಂಡುಬಂದಿತ್ತು. ನಗರದಲ್ಲಿ ಮಧ್ಯಾಹ್ನ ಹಾಗೂ ಸಂಜೆ ಸಾಧಾರಣ ಮಳೆಯಾಗಿದೆ.
ಶುಕ್ರವಾರ ದ.ಕ.ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ. ಗುರುವಾರದಂತೆ ಮುಂದಿನ ಕೆಲವು ದಿನಗಳವರೆಗೂ ಜಿಲ್ಲೆಯಲ್ಲಿ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದ.ಕ. ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನವರೆಗೆ 59.5 ಮಿಮೀ ಮಳೆ ದಾಖಲಾಗಿದೆ. ಬೆಳ್ತಂಗಡಿಯಲ್ಲಿ 68 ಮಿಮೀ, ಬಂಟ್ವಾಳದಲ್ಲಿ 58.5 ಮಿಮೀ, ಮಂಗಳೂರಿನಲ್ಲಿ 40.7 ಮಿ.ಮೀ, ಪುತ್ತೂರಿನಲ್ಲಿ 57.7 ಮಿಮೀ., ಸುಳ್ಯದಲ್ಲಿ 66.9 ಮಿಮೀ, ಮೂಡುಬಿದಿರೆಯಲ್ಲಿ 38.3 ಮಿಮೀ, ಕಡಬದಲ್ಲಿ 67.1 ಮಿಮೀ, ಮೂಲ್ಕಿಯಲ್ಲಿ 28.4 ಮಿಮೀ, ಉಳ್ಳಾಲದಲ್ಲಿ 29.1 ಮಿಮೀ ಮಳೆಯಾಗಿದೆ.





