ಫೆ.5: "ಮನರೇಗಾ ಬಚಾವೋ ಸಂಗ್ರಾಮ್" ಕಾಂಗ್ರೆಸ್ ಪಾದಯಾತ್ರೆ

ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರ ವತಿಯಿಂದ ಫೆ.5ರಂದು ಸಂಜೆ 4 ಗಂಟೆಗೆ "ಮನರೇಗಾ ಬಚಾವೋ ಸಂಗ್ರಾಮ್ " ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರಿಂದ ಪಾದಯಾತ್ರೆ ನಡೆಯಲುದೆ.
ನಗರದ ಬಲ್ಮಠದಲ್ಲಿರುವ ಶಾಂತಿನಿಲಯ ಹಾಲ್ ಬಳಿಯಿರುವ ಮೈದಾನದಿಂದ ಹೊರಟು ಮಂಗಳೂರು ಮಹಾನಗರ ಪಾಲಿಕೆ ಎದುರುಗಡೆಯಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆ ವರೆಗೆ ಈ ಪಾದಯಾತ್ರೆನಡೆಯಲಿದೆ. ಪಕ್ಷದ ನಾಯಕರು, ಪದಾಧಿಕಾರಿಗಳು, ಮಾಜಿ ಕಾರ್ಪೊರೇಟರ್ ಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಾಜಿ ಶಾಸಕ ಜೆ. ಆರ್. ಲೋಬೊ ಅವರು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.
Next Story





