ಮಾ.6: ಛತ್ರಪತಿ ಶಿವಾಜಿ ನಾಟಕ ಪ್ರದರ್ಶನ

ಮಂಗಳೂರು: ಶಿವಾಜಿ ಮಹಾರಾಜ ಸರ್ವ ಧರ್ಮ ಸಹಿಷ್ಣುತೆಯನ್ನು ಹೊಂದಿದ್ದರು ಎನ್ನುವುದನ್ನು ಪ್ರತಿಪಾಧಿಸುವ ನಾಟಕ 'ಛತ್ರಪತಿ ಶಿವಾಜಿ'ನಾಟಕ ನಿರ್ಮಿಸಿದ್ದೇನೆ ಇದರ ಪ್ರಥಮ ಪ್ರದರ್ಶನ ಮಾ.6ರಂದು ಕಟೀಲಿನಲ್ಲಿ ನಡೆಯಲಿದೆ ಎಂದು ನಾಟಕದ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ಛತ್ರಪತಿ ಶಿವಾಜಿ ನಾಟಕ ಪ್ರದರ್ಶನ ಕ್ಕೆ ಮೊದಲೇ 84 ಪ್ರದರ್ಶನ ಮುಂಗಡವಾಗಿ ನಿಗದಿಯಾಗಿದೆ. ಶಿವಾಜಿ ಮಹಾರಾಜನ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯ ಗಳಿವೆ ಅದನ್ನು ಸಾಕಷ್ಟು ಮಂದಿ ನನ್ನ ಗಮನಕ್ಕೆ ತಂದಿದ್ದಾರೆ. ಆದರೆ ನನ್ನ ನಾಟಕ ಈ ಅನುಮಾನಗಳಿಗೆ ಉತ್ತರ ನೀಡಬಹುದು.ಶಿವಾಜಿಯ ಧಾರ್ಮಿಕ ಸಹಿಷ್ಣುತೆಯನ್ನು ತಿಳಿಸುವ ಉದ್ದೇಶ ಈ ನಾಟಕ ಹೊಂದಿದೆ. ನಾಟಕವನ್ನು ನೋಡಿದ ಬಳಿಕ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ ಎಂದು ಕೋರುವುದಾಗಿ ವಿಜಯ ಕುಮಾರ್ ಕೊಡಿಯಾಲ ಬೈಲ್ ತಿಳಿಸಿದ್ದಾರೆ.
ನಾಟಕ ತಂಡದಲ್ಲಿ ರಮೇಶ್ ಕಲ್ಲಡ್ಕ ಪ್ರೀತೇಶ್ ಬಳ್ಳಾಲ್ ಭಾಗ್ (ಛತ್ರಪತಿ ಶಿವಾಜಿ ಮಹಾರಾಜರ ಪಾತ್ರ) ರೂಪಶ್ರೀ ವರ್ಕಾಡಿ ರಜಿತ್ ಕದ್ರಿ ನಿತೇಶ್ ಪೂಜಾರಿ ಏಳಿಂಜ ,ಜಯರಾಮ್ ಆಚಾರ್ಯ, ವಿಶಾಲ್‌ರಾಜ್ ಕೋಕಿಲಾ, ಯಾದವ ಮಣ್ಣಗುಡ್ಡ, ಸುದರ್ಶನ್ ಬಳ್ಳಾಲ್‌ಬಾಗ್ ಚಂದ್ರಶೇಖರ್ ಸಿದ್ದಕಟ್ಟೆ, ವೀರವಸಂತ್ ರಕ್ಷಿತ್ ಜೋಗಿ , ಸಚಿನ್ ಉಪ್ಪಳ ಪ್ರಶಾಂತ್ ಮರೋಳಿ, ಪ್ರೀತಮ್ ಎಂ. ಎಸ್. ರವಿಚಂದ್ರ ಸೋಮೇಶ್ವರ ಕಮಲಾಕ್ಷ ಪೂಜಾರಿ ಮಾಣಿ ಕಿಶೋರ್ ಕುಂಪಲ, ಹಿನ್ನೆಲೆಗಾಯನ - ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಮಣಿಕಾಂತ್ ಕದ್ರಿ ,ರವೀಂದ್ರ ಪ್ರಭು ಮೈಮ್ ರಾಮದಾಸ್ ಸಂಗೀತ ಮಣಿಕಾಂತ್ ಕದ್ರಿ,ಹಿನ್ನೆಲೆ ಸಂಗೀತ ಎಂ. ಬಿ. ಗುರುರಾಜ್ ಬೊಲ್ಲು, ಪೂರ್ಣೇಶ್ ಬೆಳ್ತಂಗಡಿ ವರ್ಣಾಲಂಕಾರ, ತಸ್ಮಯ್ ಕೊಡಿಯಾಲ್ ಬೈಲ್ ,ಕೇಶಾಲಂಕಾರ ಪುರಂದರ ನಾಗನವಳಚಿಲ್ ವಸ್ತವಿನ್ಯಾಸ:-
ಮಂಜುನಾಥ್ ಶೆಟ್ಟಿಗಾರ್ ಮುಂಬೈ ರಂಗವಿನ್ಯಾಸ:-ಎ. ಕೆ. ವಿಜಯ್ (ಕೋಕಿಲಾ) ಮತ್ತು ವಿಶಿಷ್ಟ ಕೊಡಿಯಾಲ್ ಬೈಲ್ ಸಹಕಾರ ಸುನೀ ಮಾಳ ಮತ್ತು ಸನ್ನಿ ಅಂಗಮಾಲಿ ಚಂದ್ರಶೇಖರ್ ಶಿರ್ವಮಟಾರ್ ಅಪ್ಪು, ವಿಪಿನ್ ಆರ್ಟ್ಸ್ ತಂಡನಿರ್ವಹಣೆ:- ಚಂದ್ರಕುಮಾರ್ ಕೊಡಿಯಾಲ್ ಬೈಲ್ ರಾಜೇಶ್ ಕುಡ್ಲ ಸಂಪೂರ್ಣ ಸಹಕಾರ:-ಗೀತಾ ಸಾಹಿತ್ಯ ಪ್ರಮೋದ್ ಮರವಂತೆ ಶಶಿರಾಜ್ ರಾವ್ ಕಾವೂರು ಗುರುರಾಜ್ ಎಂ. ಬಿ., ಸಾಯಿರಾಂ ಸ್ಟುಡಿಯೋಸ್ ಕಂಠದಾನ ಕಲಾವಿದರು ಪ್ರಥ್ವಿ ಅಂಬರ್ ,ನವೀನ್ ಡಿ. ಪಡೀಲ್ ಗೋಪಿನಾಥ್ ಭಟ್ ಯುವಶೆಟ್ಟಿ ತೋಡಾರ್ ,ಚೇತನ್ ರೈ ಮಾಣಿ ಚಂದ್ರಹಾಸ್ ಉಳ್ಳಾಲ್ ನಾಗರಾಜ ವರ್ಕಾಡಿ ಸುನೀಲ್ ಪರಮಜಲು ಪ್ರಾರ್ಥನಾ ಚಿದಾನಂದ ಆದ್ಯಪಾಡಿ ಸದಾಶಿವ ಅಮೀನ್ ಡಾ. ಪ್ರಿಯಾ ಹರೀಶ್ ನವೀನ್ ಶೆಟ್ಟಿ ಅಳಕೆ ಮಾಸ್ಟರ್ ಹವೀಶ್ ಆರ್. ಕುಡ್ಲ ಡಿಸೈನ್ ದೇವಿ ಶೆಟ್ಟಿ ಮುಂಬಯಿ ಸಂಚಾಲಕ ಪ್ರಕಾಶ್ ಶೆಟ್ಟಿ ಸುರತ್ಕಲ್ ವಾಹನ ಸಾರಥಿ ಲೋಕೇಶ್, ಕಮಲಾಕ್ಷ ಪೂಜಾರಿ ಮಾಣಿ ಮೊದಲಾದವರಿದ್ದಾರೆ ಎಂದು ವಿಜಯ ಕುಮಾರ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ನಟ ಪ್ರೀತೇಶ್ ಬಳ್ಳಾಲ್ ಬಾಗ್, ನಾಟಕ ರಚನೆಕಾರ ಶಶಿರಾಜ್ ಕಾವೂರು, ಎಕೆ ವಿಜಯ್ ಕೋಕಿಲ, ಕದ್ರಿ ಮಣಿಕಾಂತ್ ಉಪಸ್ಥಿತರಿದ್ದರು.







