ಜು.6: ದ.ಕ.ಜಿಲ್ಲೆಗೆ ಎಲ್ಲೋ ಅಲರ್ಟ್ ಘೋಷಣೆ

ಮಂಗಳೂರು, ಜು.5: ದ.ಕ.ಜಿಲ್ಲೆಯ ಕೆಲವೆಡೆ ಶನಿವಾರ ಬಿಸಿಲು ಕಾಣಿಸಿಕೊಂಡಿದ್ದರೂ ಹಲವೆಡೆ ಮಳೆಯಾಗಿದೆ. ಅದರಲ್ಲೂ ಬೆಳ್ತಂಗಡಿ, ಕಡಬ, ಬಂಟ್ವಾಳ ಮತ್ತಿತರ ಕಡೆ ಉತ್ತಮ ಮಳೆಯಾಗಿದೆ. ಮಂಗಳೂರುನಲ್ಲಿ ಶನಿವಾರ ಗರಿಷ್ಠ 29.3 ಮತ್ತು ಕನಿಷ್ಠ 23.1 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ.
ಕರ್ನಾಟಕ ಹವಾಮಾನ ಇಲಾಖೆಯು ದ.ಕ.ಜಿಲ್ಲೆಗೆ ಜು.6ರಂದು ಎಲ್ಲೋ ಅಲೆರ್ಟ್ ಘೋಷಿಸಿದೆ. ಜು.7ರಿಂದ 9ರ ತನಕ ಮಳೆಯ ಮುನ್ಸೂಚನೆ ನೀಡಿಲ್ಲ. ಜು.10 ಮತ್ತು 11ರಂದು ಮತ್ತೆ ಎಲ್ಲೋ ಅಲೆರ್ಟ್ ಇದೆ.
Next Story