ಫೆ.7ರಿಂದ ಹಳೆಯಂಗಡಿ ಕದಿಕೆ ಉರೂಸ್

ಹಳೆಯಂಗಡಿ: ಹಝ್ರತ್ ಸೈಯದ್ ಮೌಲಾನಾ ವಲಿಯುಲ್ಲಾಹಿ (ಖ.ಸಿ) ಅವರ ಹಳೆಯಂಗಡಿ ಕದಿಕೆ ಉರೂಸ್ ಫೆ10ರಂದು ಜರುಗಲಿದ್ದು, ಆ ಪ್ರಯುಕ್ತ ಫೆ.7ರಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಪ್ರಚಾರ ಸಮಿತಿಯ ಅಧ್ಯಕ್ಷ ಸಾಹುಲ್ ಹಮೀದ್ ಕದಿಕೆ ಹೇಳಿದ್ದಾರೆ.
ಮಂಗಳವಾರ ಹಝ್ರತ್ ಸೈಯ್ಯದ್ ವಲಿಯುಲ್ಲ ಅವರ ದರ್ಗಾ ವಠಾರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಫೆ.7ರಂದು ಸಂಜೆ ಮಗ್ರಿಬ್ ನಮಾಝ್‌ನ ಬಳಿಕ ಮರ್ಹೂಮ್ ಹಾಜಿ ಕೆ.ಸಿ. ಮೊಯ್ದೀನ್ ಮುಸ್ಲಿಯಾರ್ ಅವರ ಝಬರ್ ಝಿಯಾರತ್ ಆ ಬಳಿಕ ದರ್ಗಾ ಝಿಯಾರತ್ ನೊಂದಿಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆ ಮತ್ತು ದುಆ ಆಶೀರ್ವಚನವನ್ನು ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಝತೀಬ್ ಅಲ್ಹಾಜ್ ಮುಹಮ್ಮದ್ ಅಝ್‌ಹರ್ ಫೈಝಿ ಬೊಳ್ಳೂರು ಉಸ್ತಾದ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕದಿಕೆ, ಹಳೆಯಂಗಡಿ ಕೇಂದ್ರ ಜುಮಾ ಮಸೀದಿಯ ಖತೀಬ್ ಪಿ.ಎ. ಅಬ್ದುಲ್ಲಾ ಝೈನಿ ಬಡಗನ್ನೂರು ವಹಿಸಲಿದ್ದಾರೆ ಎಂದರು.
ಫೆ.7ರಿಂದ ಫೆ.9ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಫೆ.10ರಂದು ಮಗ್ರಿಬ್ ನಮಾಝ್ ಬಳಿಕ ಬೃಹತ್ ಸಂದಲ್ ಮೆರವಣಿಗೆ ನಡೆಯಲಿದೆ. ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ. ಕೆ. ಅಬ್ದುಲ್ ರಹಿಮಾನ್ ಕುಡುಂಬೂರು ಸಾಗ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕೇಂದ್ರ ಜುಮಾ ಮಸೀದಿಯ ಖತೀಬ್ ಪಿ.ಎ. ಅಬ್ದುಲ್ಲಾ ಝೈನಿ ಬಡಗನ್ನೂರು ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಗೆ ಒಳಪಡುವ ಜುಮಾ ಮಸೀದಿಗಳು, ಮದರಸಗಳ ಇಮಾಮರು, ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷ ಯು.ಟಿ. ಖಾದರ್, ವಕ್ಫ್ ವಸತಿ ಹಜ್ ಇಲಾಖೆಯ ಸಚಿವ ಬಿ.ಝೆಡ್. ಝಮೀರ್ ಅಹಮದ್ ಖಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಸೇರಿದಂತೆ ಧಾರ್ಮಿಕ, ರಾಜಕೀಯ, ಸಾಮಾಜಿಕ ಕ್ಷೇತ್ರದ ನಾಯಕರು, ಉಲಮಾ, ಉಮರಾಗಳು ಭಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ರಾತ್ರಿ 11ಗಂಟೆಯಿಂದ ಅನ್ನದಾನ ನಡೆಯಲಿದೆ ಎಂದು ಸಾಹುಲ್ ಹಮೀದ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಳೆಯಂಗಡಿ ಉರೂಸ್ ಸಮಿತಿಯ ಅಧ್ಯಕ್ಷ ಜಮಾಲುದ್ದೀನ್ ಕದಿಕೆ, ಜಮಾಅತ್ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಕುಡುಂಬೂರು, ಪ್ರಧಾನ ಕಾರ್ಯದರ್ಶಿ ಎಚ್. ಕೆ. ಮುಹಮ್ಮದ್, ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಮೂಡಿತೋಟ ಸಾಗ್, ಅಬ್ದುಲ್ ಖಾದರ್ ಕದಿಕೆ, ಫಕ್ರುದ್ದೀನ್ ಮುಂಚೂರು ಕದಿಕೆ, ಬಶೀರ್ ಕಲ್ಲಾಪು, ಅಬ್ದುಲ್ ಖಾದರ್ ಕಜಕತೋಟ, ರಿಯಾಝ್ ಕಲ್ಲಾಪು, ಬಶೀರ್ ಸಾಗ್, ಶೇಕಬ್ಬ ಕದಿಕೆ ಮೊದಲಾದವರು ಉಪಸ್ಥಿತರಿದ್ದರು.







