ಆ.7: ಸುರತ್ಕಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಯುವ ಬ್ರಿಗೇಡ್ ಘಟಕದ ಉದ್ಘಾಟನೆ

ಮಂಗಳೂರು: ಕನ್ನಡ ಜಾನಪದ ಪರಿಷತ್‌ನ ಅಂಗಸಂಸ್ಥೆ ಜಾನಪದ ಯುವ ಬ್ರಿಗೇಡ್ ದ.ಕ. ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಪದ ಪ್ರದಾನ ಸಮಾರಮಭ ಆ.7ರಂದು ಬೆಳಗ್ಗೆ 10 ಗಂಟೆಗೆ ಸುರತ್ಕಲ್ ಗೋವಿಂದದಾಸ ಪದವಿ ಕಾಲೇಜಿನಲ್ಲಿ ನಡೆಯಲಿದೆ.
ಮಂಗಳೂರು ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಬ್ರಿಗೇಡ್ ಸಂಚಾಲಕ ಸಂಪತ್ ಎಸ್.ಬಿ. ಹೊಸಬೆಟ್ಟು ಅವರು ಕನ್ನಡ ಜಾನಪದ ಪರಿಷತ್ ಮತ್ತು ಜಾನಪದ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಹಾಗೂ ಸ್ಥಾಪಕಾಧ್ಯಕ್ಷ ಡಾ. ಎಸ್. ಬಾಲಾಜಿ ನೂತನ ಘಟಕ ವನ್ನು ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗೋವಿಂದದಾಸ ಪದವಿ ಕಾಲೇಜು ಪ್ರಾಂಶುಪಾಲ ಹರೀಶ್ ಆಚಾರ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುರತ್ಕಲ್ ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಎಚ್. ಜಯಚಂದ್ರ ಹತ್ವಾರ್, ಗೋವಿಂದದಾಸ ಕಾಲೇಜು ನಿರ್ದೇಶಕ ರಮೇಶ್ ಭಟ್, ಗೋವಿಂದ ದಾಸ ಪ.ಪೂ ಕಾಲೇಜು ಪ್ರಾಂಶುಪಾಲೆ ಲಕ್ಷ್ಮೀ .ಪಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜಾನಪದ ಯುವ ಬ್ರಿಗೇಡ್‌ನ ದಕ್ಷಿಣ ಕನ್ನಡ ಜಿಲ್ಲೆಯ ಸಂಚಾಲಕ ಸಂಪತ್ ಎಸ್.ಬಿ , ಹೊಸಬೆಟ್ಟು, ಸಹ ಸಂಚಾಲಕರಾದ ಸೌರವ್ ಶ್ರೀಯಾನ್, ಮಂಗಳೂರು ತಾಲೂಕು ಸಂಚಾಲಕ ಕಾರ್ತಿಕ್ ರಾವ್ ಇಡ್ಯಾ, ಮೂಡಬಿದಿರೆ ತಾಲೂಕು ಸಂಚಾಲಕ ಕೌಶಲ್ ರಾವ್ ಪುತ್ತಿಗೆ, ಬಂಟ್ವಾಳ ತಾಲೂಕು ಸಂಚಾಲಕ ಸತ್ಯಜಿತ್ ಎಚ್. ರಾವ್. ಬಂಟ್ವಾಳ ಹಾಗೂ ಕಡಬ ತಾಲೂಕು ಸಂಚಾಲಕ ಶ್ರೇಯಾ ರೋಹಿತ್ ಉಚ್ಚಿಲ ಇವರು ಪದ ಸ್ವೀಕರಿಸಲಿರುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಡಬ ತಾಲೂಕು ಸಂಚಾಲಕ ಶ್ರೇಯಾ ರೋಹಿತ್ ಉಚ್ಚಿಲ, ಎಲ್.ಎನ್. ರಾವ್ ಉಪಸ್ಥಿತರಿದ್ದರು.







