ಸೆ.7: ಚಂದ್ರಗ್ರಹಣ ನಮಾಝ್
ಮಂಗಳೂರು, ಸೆ.6: ರವಿವಾರ ಅಸ್ತಮಿಸಿದ (ಸೆ.7) ಸೋಮವಾರ ರಾತ್ರಿ 8:58 ಗಂಟೆಯಿಂದ 2:25ರವರೆಗೆ ಚಂದ್ರಗ್ರಹಣವಿದ್ದು, ಗ್ರಹಣ ನಮಾಝ್ ಸುನ್ನತ್ ಆಗಿದೆ ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ತಿಳಿಸಿದ್ದಾರೆ.
ಖಾಝಿಯ ಸೂಚನೆಯಂತೆ ಬಂದರ್‌ನ ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬ್ ಸೈಯ್ಯದ್ ಶಂಸುದ್ದೀನ್ ಬಾಸಿತ್ ಬಾಅಲವಿ ತಂಳ್ ಅಲ್ ಅನ್ಸಾರಿ ಕುಕ್ಕಾಜೆ ಅವರ ನೇತೃತ್ವದಲ್ಲಿ ಗ್ರಹಣ ನಮಾಝ್ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.
Next Story





