ಸೆ.8: ಮಂಜನಾಡಿಯಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್
ಉಳ್ಳಾಲ: ಕರ್ನಾಟಕ ಮುಸ್ಲಿಮ್ ಜಮಾಅತ್, ಎಸ್.ವೈ.ಎಸ್., ಎಸ್ಸೆಸ್ಸೆಫ್ ಮಂಜನಾಡಿ ಸರ್ಕಲ್ ವತಿಯಿಂದ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಸೆ.8ರಂದು ಸಂಜೆ 4 ಗಂಟೆಗೆ ಮಂಜನಾಡಿ ಜಂಕ್ಷನ್ ನಲ್ಲಿ ನಡೆಯಲಿದೆ.
ಸೈಯದ್ ಮುಖ್ತಾರ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಮಂಜನಾಡಿ ಜುಮಾ ಮಸೀದಿಯ ಖತೀಬ್ ಪಿ.ಎ.ಅಹ್ಮದ್ ಬಾಖವಿ ಉದ್ಘಾಟಿಸುವರು. ಕರ್ನಾಟಕ ಮುಸ್ಲಿಮ್ ಜಮಾಅತ್ ಮಂಜನಾಡಿ ಅಧ್ಯಕ್ಷ ಕರೀಂ ಫೈಝಿ ಅಧ್ಯಕ್ಷತೆಯಲ್ಲಿ ಹಾಫಿಲ್ ಮಾಶ್ಹೂದ್ ಸಖಾಫಿ ಗೂಡಲ್ಲೂರ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಸ್ವಾಗತ ಸಮಿತಿಯ ಕನ್ವೀನರ್ ಇಬ್ರಾಹೀಂ ಅಹ್ಸನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story