ಫೆ.9: ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ನಿಂದ ಸಾಮೂಹಿಕ ವಿವಾಹ

ಸಾಂದರ್ಭಿಕ ಚಿತ್ರ
ಮಂಗಳೂರು, ಫೆ.7: ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ (ರಿ) ಬರ್ಕೆ ಮಂಗಳೂರು ಇದರ ವತಿಯಿಂದ 9 ಹೆಣ್ಣು ಮಕ್ಕಳ ವಿವಾಹವು ನಗರದ ಬೋಳಾರ ಶಾದಿ ಮಹಲ್ನಲ್ಲಿ ಫೆ.9ರಂದು ಬೆಳಗ್ಗೆ 10:30ಕ್ಕೆ ನಡೆಯಲಿದೆ.
ಟ್ರಸ್ಟಿನ ಅಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅಲ್ಹಾಜ್ ಕೆ.ಎಸ್ ಮೊಹಮ್ಮದ್ ಮಸೂದ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ನಿಖಾಹ್ನ ನೇತೃತ್ವವನ್ನು ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖ ಅಹ್ಮದ್ ಮುಸ್ಲಿಯಾರ್ ಹಾಗೂ ಕುದ್ರೋಳಿ ಜಾಮಿಯಾ ಮಸೀದಿಯ ಖಾಜಿ ಮೌಲಾನಾ ಶೇಖ್ ಮುತಾಹರ್ ಹುಸೇನ್ ಕಾಸಿಮಿ ವಹಿಸಲಿದ್ದಾರೆ. ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಸಭೆಯನ್ನು ಉದ್ಘಾಟಿಸಲಿದ್ದಾರೆ.
ಯೆನೆಪೋಯ ವಿವಿಯ ಕುಲಾಧಿಪತಿ ಹಾಜಿ ಯೆನಪೋಯ ಅಬ್ದುಲ್ಲಾ ಕುಂಞಿ, ಯುಎಇ ನ್ಯಾಶ್ ಗ್ರೂಪ್ ಆಫ್ ಕಂಪೆನಿಯ ನಿರ್ದೇಶಕ ಹಾಜಿ ಕೆ.ಎಸ್. ನಿಸಾರ್ ಅಹ್ಮದ್ ಕಾರ್ಕಳ, ಟ್ರಸ್ಟಿಗಳಾದ ಹಾಜಿ ಕೆ.ಎಸ್. ಫಝಲುರ್ರಹ್ಮಾನ್, ಹಾಜಿ ಕೆ.ಎಸ್. ಇಮ್ತಿಯಾಝ್ ಅಹ್ಮದ್ ಕಾರ್ಕಳ, ಮುಹಮ್ಮದ್ ಆಸಿಫ್ ಮಸೂದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಡಾ. ಮುಹಮ್ಮದ್ ಆರೀಫ್ ಮಸೂದ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.





