ಉಳ್ಳಾಲ ದರ್ಗಾಕ್ಕೆ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಭೇಟಿ

ಉಳ್ಳಾಲ: ದಾವಣೆಗೆರೆ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಝಿಯಾರತ್, ದುಆ ನೆರೆವೇರಿಸಿದರು.
ಬಳಿಕ ದರ್ಗಾ ಕಚೇರಿಗೆ ಭೇಟಿ ನೀಡಿದ ಅವರನ್ನು ಉಳ್ಳಾಲ ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಶಾಲು ಹೊದಿಸಿ ಸನ್ಮಾನಿಸಿ, ಸ್ವಾಗತಿಸಿದರು.
ಈ ಸಂದರ್ಭ ದಾವಣೆಗೆರೆ ಜಿಲ್ಲಾ ವಕ್ಫ್ ಅಧ್ಯಕ್ಷ ಸಿರಾಜ್, ದ.ಕ ಜಿಲ್ಲಾ ವಕ್ಫ್ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ದರ್ಗಾ ಕೋಶಾಧಿಕಾರಿ ನಾಝಿಮ್ ರಹ್ಮಾನ್, ಕಾರ್ಯದರ್ಶಿ ಇಸಾಕ್ ಮೇಲಂಗಡಿ, ಸದಸ್ಯರಾದ ಝೈನಾಕ ಮೇಲಂಗಡಿ, ಫಾರೂಕ್ ಮುಕ್ಕಚ್ಚೇರಿ, ಯುಡಿ ಅಶ್ರಫ್ ಅಳೇಕಲ, ಉಪಸ್ಥಿತರಿದ್ದರು.
Next Story





