ಅಂಗಡಿ ವ್ಯಾಪಾರಿಗೆ ಕೊಲೆ ಬೆದರಿಕೆ ಆರೋಪ: ದೂರು ದಾಖಲು

ಮಂಗಳೂರು, ಸೆ.15: ನಗರದ ಎಕ್ಕೂರು ಮೇಗಿನ ಮನೆ ಎಂಬಲ್ಲಿ ಅಂಗಡಿ ವ್ಯಾಪಾರಿಗೆ ಚೂರಿ ಬೀಸಿ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ಕಂಕನಾಡಿ ನಗರ ಠಾಣೆಗೆ ದೂರು ನೀಡಲಾಗಿದೆ.
ಸೆ.13ರಂದು ರಾತ್ರಿ 10ಕ್ಕೆ ದೊಡ್ಡಪ್ಪನ ದಿನಸಿ ಅಂಗಡಿಯಲ್ಲಿದ್ದಾಗ ಧನುಷ್ ಭಂಡಾರಿ ಎಂಬಾತ ಬಂದು ಜ್ಯೂಸ್ ಹಾಗೂ ತಿಂಡಿ ತಿನಿಸು ತಿಂದು ಹಣ ಕೊಡದೆ ಹೋಗಿದ್ದ. ಸೆ.14ರಂದು ರಾತ್ರಿ 9ಕ್ಕೆ ಮತ್ತೆ ಬಂದು ಸಿಗರೇಟ್ ಕೇಳಿದಾಗ ಬಾಕಿ ಹಣ ಕೊಟ್ಟರೆ ಸಿಗರೇಟ್ ಕೊಡುವುದಾಗಿ ತಾನು ಹೇಳಿದೆ. ಆವಾಗ ಆರೋಪಿಯು ಅವಾಚ್ಯವಾಗಿ ಬೈದು ಚೂರಿ ಬೀಸಿ ಅಂಗಡಿಯ ಒಳಗೆ ನುಗ್ಗಲು ಪ್ರಯತ್ನಿಸಿದಾಗ ಅಲ್ಲಿದ್ದ ಇತರರು ತನ್ನನ್ನು ರಕ್ಷಿಸಿದರು ಎಂದು ಪ್ರಜ್ವಲ್ ದೂರಿನಲ್ಲಿ ತಿಳಿಸಿದ್ದಾರೆ.
Next Story





