ಮಾವೇಲಿ ಎಕ್ಸ್‌ಪ್ರೆಸ್‌ನಲ್ಲಿ ಹೆಚ್ಚುವರಿ ಎಸಿ ಕೋಚ್

ಮಂಗಳೂರು, ಸೆ.26: ಪ್ರಯಾಣಿಕರ ನೂಕು ನುಗ್ಗಲು ನಿವಾರಿಸಲು ತಾತ್ಕಾಲಿಕವಾಗಿ ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್‌ನಲ್ಲಿ ಹೆಚ್ಚುವರಿ ಕೋಚ್‌ಗಳನ್ನು ಒದಗಿಸಲಾಗುವುದು.
2023 ಸೆ. 26 ರಿಂದ ಅ.3 ರವರೆಗೆ ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲು (ನಂ.16603 ) ಸೇವೆಯನ್ನು ಹೆಚ್ಚುವರಿ ಎಸಿ 3-ಟೈರ್ ಕೋಚ್‌ನೊಂದಿಗೆ ತಾತ್ಕಾಲಿಕವಾಗಿ ಒದಗಿಸಲಾಗಿದೆ.
ಸೆ. 27 ರಿಂದ ಅ.1ರವರೆಗೆ ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡುವ ರೈಲು (ನಂ.16604) ತಿರುವನಂತಪುರಂ ಸೆಂಟ್ರಲ್ - ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್‌ನ ಸೇವೆಯನ್ನು ತಾತ್ಕಾಲಿಕವಾಗಿ ಹೆಚ್ಚುವರಿ ಎಸಿ 3-ಟೈರ್ ಕೋಚ್‌ನೊಂದಿಗೆ ಒದಗಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





