ಮುಂಬೈ ಲೋಕಮಾನ್ಯ ತಿಲಕ್ - ಮಂಗಳೂರು ಜಂಕ್ಷನ್ ರೈಲಿಗೆ ಹೆಚ್ಚುವರಿ ಕೋಚ್

ಸಾಂದರ್ಭಿಕ ಚಿತ್ರ
ಮಂಗಳೂರು: ಪ್ರಯಾಣಿಕರ ಒತ್ತಡವನ್ನು ಕಡಿಮೆಗೊಳಿಸಲು ಮುಂಬೈ ಲೋಕಮಾನ್ಯ ತಿಲಕ್ - ಮಂಗಳೂರು ಜಂಕ್ಷನ್ ರೈಲಿಗೆ ವಿಶೇಷ ರೈಲುಗಳಿಗೆ ತಾತ್ಕಾಲಿಕವಾಗಿ 3 ಸ್ಲೀಪರ್ ಕ್ಲಾಸ್ ಕೋಚ್ಗಳು ಮತ್ತು ಒಂದು ಜನರಲ್ ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಕೋಚ್ಗಳನ್ನು ಒದಗಿಸಲಾಗುವುದು.
2023ರ ಸೆ. 29 ಮತ್ತು 30ರಂದು ಮುಂಬೈ ಲೋಕಮಾನ್ಯ ತಿಲಕ್ನಿಂದ ಹೊರಡುವ ರೈಲು (ನಂಬ್ರ 01165) ಮುಂಬೈ ಲೋಕಮಾನ್ಯ ತಿಲಕ್ - ಮಂಗಳೂರು ಜಂಕ್ಷನ್ ವಿಶೇಷ ರೈಲಿಗೆ 3 ಸ್ಲೀಪರ್ ಕ್ಲಾಸ್ ಕೋಚ್ಗಳು ಮತ್ತು ಒಂದು ಸಾಮಾನ್ಯ ಎರಡನೇ ದರ್ಜೆಯ ಸಿಟ್ಟಿಂಗ್ ಕೋಚ್ನ್ನು ಸೇರ್ಪಡೆಗೊಳಿಸಲಾಗುವುದು.
ಸೆ.30 ಮತ್ತು ಅ.1ರಂದು ಮಂಗಳೂರು ಜಂಕ್ಷನ್ನಿಂದ ಹೊರಡಲಿರುವ ಮಂಗಳೂರು ಜಂಕ್ಷನ್ - ಮುಂಬೈ ಲೋಕಮಾನ್ಯ ತಿಲಕ್ ವಿಶೇಷ ರೈಲಿಗೆ (ನಂಬ್ರ 01166) 3 ಸ್ಲೀಪರ್ ಕ್ಲಾಸ್ ಕೋಚ್ಗಳು ಮತ್ತು ಒಂದು ಸಾಮಾನ್ಯ ಎರಡನೇ ದರ್ಜೆಯ ಸಿಟ್ಟಿಂಗ್ ಕೋಚ್ಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ರೈಲ್ವೇ ಪ್ರಕಟನೆ ತಿಳಿಸಿದೆ.
Next Story





