ಅಡ್ಡೂರು ಸೆಂಟ್ರಲ್ ಕಮಿಟಿ ಮಹಾಸಭೆ : ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ನಂದ್ಯ ಆಯ್ಕೆ

ಅಬ್ದುಲ್ ರಝಾಕ್ ನಂದ್ಯ
ಅಡ್ಡೂರು ಸೆಂಟ್ರಲ್ ಕಮಿಟಿಯ 2025–26ನೇ ಸಾಲಿನ ಮಹಾಸಭೆಯು ನ.21 ರಂದು ಮವಾದಿ ರೆಸಾರ್ಟ್ ಸಫ್ವಾ ದಮ್ಮಾಮ್ ನಲ್ಲಿ ಕಮಿಟಿಯ ಅಧ್ಯಕ್ಷರಾದ ಎಮ್ಎಸ್.ರಫೀಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವು ಕಮಿಟಿಯ ಸಲಹೆಗಾರ ಎ.ಪಿ. ಮುಹಮ್ಮದ್ ರವರ ಕಿರಾಅತ್ ಪಠಣದೊಂದಿಗೆ ಆರಂಭವಾಯಿತು. ಬಳಿಕ ಜುಬೈಲ್ ಕಮಿಟಿಯ ಕಾರ್ಯದರ್ಶಿ ರಶೀದ್ ಎ.ಕೆ. ಅವರು ಆಗಮಿಸಿದ ಎಲ್ಲಾ ಏರಿಯಾ ಕಮಿಟಿ ಅಧ್ಯಕ್ಷರು, ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಸ್ವಾಗತ ಕೋರಿದರು.
ಪ್ರಧಾನ ಕಾರ್ಯದರ್ಶಿ ಮನ್ಸೂರ್ ರವರು ವಾರ್ಷಿಕ ವರದಿ ಮಂಡಿಸಿದರು. ಜೊತೆಗೆ ಜೊತೆ ಕಾರ್ಯದರ್ಶಿ ಖಲಂದರ್ ಗುತ್ತು ರವರು ವಾರ್ಷಿಕ ಹಣಕಾಸಿನ ವರದಿ ಮಂಡಿಸಿದರು ಹಾಗೂ ಸಭೆಯಲ್ಲಿ ಇದನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು.
ಅಧ್ಯಕ್ಷ ಎಮ್.ಎಸ್.ರಫೀಕ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಮಿಟಿಯ ಅಭಿವೃದ್ಧಿಗೆ ಶ್ರಮಿಸಿದವರನ್ನು ಸ್ಮರಿಸಿದರು ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಹಳೆ ಕಮಿಟಿಯನ್ನು ವಿಸರ್ಜಿಸಿ ಹೊಸ ಕಮಿಟಿ ರಚನೆಗೆ ಅನುವು ಮಾಡಿ ಕೊಡಲಾಯಿತು ಹಾಗೂ ಹೊಸ ಕಮಿಟಿ ರಚನೆಯ ಉಸ್ತುವಾರಿಯನ್ನು ಎ.ಎಸ್.ಅಶ್ರಫ್ ಅವರು ವಹಿಸಿದರು.
ನೂತನ ಕಮಿಟಿಯ ಸಾರಥಿಗಳು :
ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ನಂದ್ಯ, ಉಪಾಧ್ಯಕ್ಷರಾಗಿ ಶರೀಫ್ G.A ಹಾಗೂ ಶಮೀರ್ ಅಳಕೆ, ಗೌರವಾಧ್ಯಕ್ಷರಾಗಿ ಎಮ್.ಎಸ್.ರಫೀಕ್, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ತೋಕೂರ್, ಜೊತೆ ಕಾರ್ಯದರ್ಶಿಯಾಗಿ ಶರೀಫ್ ಗೋಳಿಪಡ್ಪು ಹಾಗೂ ನವಾಝ್ ತೋಕೂರ್, ಖಜಾಂಚಿಯಾಗಿ ನೂರ್ ತೋಕೂರ್, ಲೆಕ್ಕ ಪರಿಶೋಧಕರಾಗಿ ಖಲಂದರ್ ಗುತ್ತು ಹಾಗೂ ಎಲ್ಲಾ ಏರಿಯಾ ಕಮಿಟಿಯ 5 ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.







