‘ಎಚ್ಐಎಫ್ ಇಂಡಿಯಾ’ದ ನೂತನ ಅಧ್ಯಕ್ಷರಾಗಿ ಆದಿಲ್ ಪರ್ವೇಝ್ ಆಯ್ಕೆ

ಮಂಗಳೂರು: ‘ಎಚ್ಐಎಫ್ ಇಂಡಿಯಾ’ (HIF India)ದ ನೂತನ ಅಧ್ಯಕ್ಷರಾಗಿ ಆದಿಲ್ ಪರ್ವೇಝ್ ಸೋಮವಾರ ಆಯ್ಕೆಯಾಗಿದ್ದಾರೆ.
HIF India ದ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮುಂದಿನ 3 ವರ್ಷಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಕಚ್ಚಿ ಮಸೀದಿ ಖತೀಬ್ ಮೌಲಾನಾ ಶೋಬ್ ಹುಸೇನ್ ನದ್ವಿ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
HIF ಸದಸ್ಯ ಮಹಮ್ಮದ್ ಹನೀಫ್ ಪಿ.ಎಸ್ ಕಿರಾಅತ್ ಪಠಿಸಿದರು. HIF ಸದಸ್ಯ ಬಿಲಾಲ್ ರೈಫ್ ಕಾರ್ಯಕ್ರಮವನ್ನು ನಿರೂಪಿಸಿದರು.
ಮಾಜಿ ಅಧ್ಯಕ್ಷರಾದ ನಾಝಿಮ್ ಎ.ಕೆ. ಧನ್ಯವಾದವನ್ನು ಸಲ್ಲಿಸಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
Next Story