Mangaluru | ಅಡ್ಯಾರ್‌ನಲ್ಲಿ ತಖ್ವಾ ಹಿಫ್ಝುಲ್ ಕುರ್‌ಆನ್ ಅಕಾಡೆಮಿ, ತಖ್ವಾ ಪಬ್ಲಿಕ್ ಸ್ಕೂಲ್ ಹಾಸ್ಟೆಲ್ ಕಟ್ಟಡಕ್ಕೆ ಶಿಲಾನ್ಯಾಸ

ಮಂಗಳೂರು: ಪಂಪ್‌ವೆಲ್‌ನ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ನಗರದ ಹೊರವಲಯದ ಅಡ್ಯಾರ್‌ನಲ್ಲಿ 6 ಕೋಟಿ ರೂ . ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ತಖ್ವಾ ಹಿಫ್ಝುಲ್ ಕುರ್‌ಆನ್ ಅಕಾಡೆಮಿ , ತಖ್ವಾ ಪಬ್ಲಿಕ್ ಸ್ಕೂಲ್ ಮತ್ತು ಹಾಸ್ಟೆಲ್ ಕಟ್ಟಡಕ್ಕೆ ಕುಂಬೋಳ್ ಅಸ್ಸೈಯದ್ ಕೆ.ಎಸ್. ಆಟಕ್ಕೋಯ ತಂಙಳ್ ಅವರು ಸೋಮವಾರ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಸ್ಲಿಂ ಸಮುದಾಯ ಶಿಕ್ಷಣದಲ್ಲಿ ಹಿಂದುಳಿದವರು ಎಂಬ ಅಪವಾದ ಇದೀಗ ನಿವಾರಣೆಯಾಗುತ್ತಿದ್ದು, ಕೇರಳದಲ್ಲಿ ಮುಸ್ಲಿಮರು ಶಿಕ್ಷಣದಲ್ಲಿ ಹೆಚ್ಚು ಮುಂದುವರಿದಿದ್ದಾರೆ. ಕೇರಳದಲ್ಲಿ ಎಪಿ ಉಸ್ತಾದ್ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದಲ್ಲಿ ಕ್ರಾಂತಿ ನಡೆಯುತ್ತಿದೆ. ಕರ್ನಾಟಕದಲ್ಲೂ ಅದೇ ರೀತಿ ಮುಸ್ಲಿಮರು ಶಿಕ್ಷಣದಲ್ಲಿ ಮುಂದುವರಿಯಬೇಕಾಗಿದೆ ಎಂದರು.
ಮುಂದಿನ ಪೀಳಿಗೆ ಶಿಕ್ಷಣದಿಂದ ವಂಚಿತರಾಗಬಾರದು. ಅವರಿಗೆ ಅಗತ್ಯದ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಒಂದೇ ಕಡೆ ಸಿಗಬೇಕು. ಅಂತಹ ಸಂಸ್ಥೆಗಳನ್ನು ಕಟ್ಟುವ ನಿಟ್ಟಿನಲ್ಲಿ ಧಾರ್ಮಿಕ ವಿದ್ವಾಂಸರ ಮಾರ್ಗದರ್ಶನದೊಂದಿಗೆ ಸಮುದಾಯದ ಧುರೀಣರು ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಖ್ಯಾತ ಇಸ್ಲಾಮಿಕ್ ವಿದ್ವಾಂಸರು, ಕ್ಯಾಲಿಕಟ್‌ನ ಮರ್ಕಝ್ ನಾಲೆಜ್ ಸಿಟಿಯ ಆಡಳಿತ ನಿರ್ದೇಶಕ ಡಾ.ಅಬ್ದುಲ್ ಹಕೀಮ್ ಅಝ್ಹರಿ ಅವರು ಜ್ಞಾನವೇ ಮಾನವ ಬದುಕಿನ ದೊಡ್ಡ ಶಕ್ತಿ ಎಂಬ ಮಾತಿದೆ. ಆದರೆ ಇಸ್ಲಾಮ್ ಪ್ರಕಾರ ಜ್ಞಾನವೇ ಜೀವನ, ಜ್ಞಾನವೇ ಆತ್ಮ. ಜ್ಞಾನವು ಎಲ್ಲವೂ ಆಗಿದೆ. ಜ್ಞಾನವಿಲ್ಲದೆ ಜೀವನವೇ ಇಲ್ಲ ಎಂದು ನುಡಿದರು.
ಮುಸ್ಲಿಂರಿಗೆ ಧಾರ್ಮಿಕ ಜ್ಞಾನವೇ ಮೂಲಭೂತ ಜ್ಞಾನವಾಗಿದೆ. ಕುರ್‌ಆನ್ ಮತ್ತು ಹದೀಸ್ ಇಸ್ಲಾಮಿಕ್ ಜ್ಞಾನದ ತಳಹದಿಯಾಗಿದೆ ಎಂದು ಹೇಳಿದರು.
ಅಡ್ಯಾರ್‌ನಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಮತ್ತು ಆಧುನಿಕ ಶಿಕ್ಷಣ ದೊರೆಯಲಿದೆ. ಏಕೀಕೃತ ಶಿಕ್ಷಣ ವ್ಯವಸ್ಥೆಯಲ್ಲಿ ಅಂತರರಾಷ್ಟ್ರೀಯ ಪಠ್ಯಕ್ರಮವನ್ನು ಅಳವಡಿಸಲಾಗುವುದು ಎಂದು ಹೇಳಿದರು.
ತಖ್ವಾ ಅಕಾಡೆಮಿಯ ಅಧ್ಯಕ್ಷ ಡಾ. ಯೆನೆಪೋಯ ಅಬ್ದುಲ್ ಕುಂಞಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ ಇಫ್ತಿಕಾರ್ ಮುಖ್ಯ ಅತಿಥಿಯಾಗಿದ್ದರು.
ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ, ಮಾಜಿ ಮೇಯರ್ ಕೆ .ಆಶ್ರಫ್ , ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಬಂದರ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮೀಫ್ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ, ಪ್ರಮುಖರಾದ ಡಾ. ಹಬೀಬ್ ರಹ್ಮಾನ್ , ಬಿ ಎ ಸಲಾಂ ತುಂಬೆ, ಅಬ್ದುಲ್ ರಹಿಮಾನ್ ಕಣಚೂರು, ಆಸಿಫ್ ಹೋಂ ಪ್ಲಸ್, ಅಝಾದ್ ಮನ್ಸೂರ್ ಹಾಜಿ, ಅಬ್ದುಲ್ ಜಲೀಲ್ ಬ್ರೈಟ್ , ಅಬ್ದುಲ್ ಮಜೀದ್ ಹಾಜಿ , ಕೆ ಮುನೀರ್ , ಕೆಎಚ್ ಕರೀಮ್ ಹಾಜಿ, ಎಚ್ ಎಚ್ ಅಮೀನ್ ಹಾಜಿ , ಹೈದರ್ ಪರ್ತಿಪ್ಪಾಡಿ, ಐಟಮ್ ಸಾಕಿರ್ ಹಾಜಿ, ಹಾರಿಸ್ ಮೆರೈನ್, ಬಿ ಎಂ ಶೌಕತ್ ಅಲಿ, ಪಂಪ್‌ವೆಲ್ ತಖ್ವಾ ಮಸೀದಿ ಖತೀಬ್ ಮುಹಮ್ಮದ್ ಸಖಾಫಿ ಅಲ್ ಹಿಕಮಿ, ಮಾಜಿ ಖತೀಬ್ ಅಬ್ದುಲ್ ರ‌್ರಹ್ಮಾನ್ ಸಖಾಫಿ, ಕೆ ಮುಹಮ್ಮದ್ ಅರಬಿ, ಅಶ್ರಫ್ ಕಿನಾರ ಅಬೂಬಕರ್, ರೈಸ್ಕೊ ಕೆಪಿಎಫ್, ಬಿ ಎ ನಝೀರ್, ಅಹಮ್ಮದ್ ಬಾವಾ, ಕಣ್ಣೂರು ಕೇಂದ್ರ ಜುಮಾ ಮಸೀದಿ ಖತೀಬ್ ಅನ್ಸಾರ್ ಫೈಝಿ ಕಣ್ಣೂರು, ಕರ್ನಾಟಕ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಅಶ್ರಫ್ ಸಅದಿ ಮಲ್ಲೂರು ಮತ್ತಿತರರು ಉಪಸ್ಥಿತರಿದ್ದರು.
ತಖ್ವಾ ಅಕಾಡೆಮಿಯ ಸಂಚಾಲಕರಾದ ಎಸ್‌ಎಂ ರಶೀದ್ ಹಾಜಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಸಖಾಪಿ ಝೈನಿ ಕಾಮಿಲ್ ವಂದಿಸಿದರು.







