ಅಲ್ ಮದೀನ 30 ನೇ ವಾರ್ಷಿಕ ಮಹಾ ಸಮ್ಮೇಳನ ಸ್ವಾಗತ ಸಮಿತಿ ರಚನೆ
ಚೆಯರ್‌ಮ್ಯಾನ್ ಆಗಿ ಡಾ. ಯು.ಟಿ.ಇಫ್ತಿಕಾರ್, ಕನ್ವೀನರ್ ಆಗಿ ಹಾಜಿ ಎನ್.ಎಸ್.ಕರೀಂ ಆಯ್ಕೆ

ಮಂಗಳೂರು, ಸೆ.3: ಧಾರ್ಮಿಕ- ಶೈಕ್ಷಣಿಕ-ಸಾಮಾಜಿಕ- ಸೇವಾ ಸಂಸ್ಥೆ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ತನ್ನ ಸೇವೆಯ 30 ಸಂವತ್ಸರಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹತ್ತು ಹಲವು ಕಾರ್ಯ ಯೋಜನೆ ಗಳೊಂದಿಗೆ ಮುಂಬರುವ 2024 ಫೆಬ್ರವರಿ 1,2,3,4 ನೇ ದಿನಾಂಕಗಳಲ್ಲಿ ವಿಜೃಂಭಣೆಯ ಮಹಾ ಸಮ್ಮೇಳನವು ನಡೆಯಲಿದ್ದು ಇದರ ಸ್ವಾಗತ ಸಮಿತಿ ರಚನಾ ಸಮಾವೇಶವು ಶನಿವಾರ ಅಲ್ ಮದೀನದಲ್ಲಿ ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅಧ್ಯಕ್ಷತೆಯಲ್ಲಿ ಜರುಗಿತು.
ಬಾಳೆಪುಣಿ ಮುದರ್ರಿಸ್ ಮುಹಮ್ಮದ್ ಫೈಝಿ ದುಆ ನೆರವೇರಿಸಿದರು. ಉಡುಪಿ ಜಿಲ್ಲಾ ಸಹಾಯಕ ಖಾಝಿ ಅಬ್ದುರ‌್ರಹ್ಮಾನ್ ಮದನಿ ಮೂಳೂರು ಉದ್ಘಾಟಿಸಿದರು.
ಶರಫುಸ್ಸಾದಾತ್ ಸಯ್ಯಿದ್ ಅಶ್ರಫ್ ತಂಳ್ ಆದೂರು, ಸಯ್ಯಿದ್ ಜಲಾಲ್ ತಂಳ್ ಅಲ್ ಬುಖಾರಿ ಮಳ್ಹರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಮುಹಮ್ಮದ್ ಅಲಿ ಸಖಾಫಿ ದಾರುಲ್ ಅಶ್‌ಅರಿಯ್ಯ, ಕೆ.ಎಂ ಸಿದ್ದೀಕ್ ಮೋಂಟುಗೋಳಿ, ಅಬ್ದುರ‌್ರಹ್ಮಾನ್ ರಝ್ವಿ ಕಲ್ಕಟ್ಟ, ಮಜೀದ್ ಹಾಜಿ, ಶುಭ ಹಾರೈಸಿದರು.
ಮುಹಮ್ಮದ್ ಕುಂಞಿ ಅಮ್ಜದಿ ಸ್ವಾಗತಿಸಿದರು. ಅಬೂಸ್ವಾಲಿಹ್ ಅಝ್ಹರಿ ಸಮ್ಮೇಳನದ ಉದ್ದೇಶಿತ ಯೋಜನೆಗಳನ್ನು ಪ್ರಕಟಿಸಿದರು.
ಸಮ್ಮೇಳನದ ಸ್ವಾಗತ ಸಮಿತಿ ಚೆಯರ್‌ಮ್ಯಾನ್ ಆಗಿ ಡಾ ಯು.ಟಿ. ಇಫ್ತಿಕಾರ್, ಕನ್ವೀನರ್ ಆಗಿ ಹಾಜಿ ಎನ್.ಎಸ್ ಕರೀಂ, ಕೋಶಾಧಿಕಾರಿಯಾಗಿ ಎಸ್.ಕೆ ಖಾದರ್ ಹಾಜಿ ಇವರನ್ನು ಆರಿಸಲಾಯಿತು. ಮ್ಯಾರೇಜ್ ಕಮಿಟಿ ಚೆಯರ್‌ಮ್ಯಾನ್ ಆಗಿ ಹಾಜಿ ಫಾರೂಖ್ ಅಬ್ಬಾಸ್ ಉಳ್ಳಾಲ, ಕನ್ವೀನರ್ ಆಗಿ ಹಮೀದ್ ಹಾಜಿ ದೇರಳ ಕಟ್ಟೆ, ಕೋಶಾಧಿಕಾರಿಯಾಗಿ ಸುಲೈಮಾನ್ ಹಾಜಿ ಸಿಂಗಾರಿ ಇವರನ್ನು ಆರಿಸಲಾಯಿತು. ಹಾಗೂ ವಿವಿಧ ಸಮಿತಿಗಳನ್ನೂ ರಚಿಸಲಾಯಿತು.
ವೇದಿಕೆಯಲ್ಲಿ ಹಾಜಿ ಅಲಿಕುಂಞಿ ಪಾರೆ, ಅಬ್ದುಲ್ ಜಲೀಲ್ ಜಲೀಲ್ ಬ್ರೈಟ್, ಹಾಜಿ ಅಬೂಬಕರ್ ವಕ್ಫ್, ಉಮರ್ ಸಖಾಫಿ ತಲಕ್ಕಿ, ಅಝೀಝ್ ಪರ್ತಿಪಾಡಿ, ಅಬ್ಬಾಸ್ ಸಖಾಫಿ ಕೊಡಂಚಿಲ್ ಮುಂತಾದವರು ಉಪಸ್ಥಿತರಿದ್ದರು.
ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಕಾರ್ಯಕ್ರಮ ನಿರ್ವಹಿಸಿದರು. ಅಬ್ದುರ‌್ರಹ್ಮಾನ್ ಅಹ್ಸನಿ ಮರ್ಝೂಖಿ ಧನ್ಯವಾದವಿತ್ತರು.







