ಅಲ್ ಮದೀನಾ ವಿದ್ಯಾರ್ಥಿ ಸಂಘಟನೆಗೆ ನೂತನ ಸಾರಥ್ಯ
ಮಂಗಳೂರು: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಅಧೀನದ ಅಲ್ ಮದೀನಾ ಹಿಬ್ರ್ ಹಾಲ್ ಆಫ್ ಎಕ್ಸಲೆನ್ಸ್ (ದಅವಾ ಕಾಲೇಜು) ಕಾಲೇಜಿನ ವಿದ್ಯಾರ್ಥಿ ಸಂಘಟನೆ ಬಿಶಾರತುಲ್ ಮದೀನ ಸ್ಟೂಡೆಂಟ್ ಅಸೋಸಿಯೇಷನ್ ನ ಮಹಾಸಭೆ ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸೈಯದ್ ಉವೈಸ್ ಅಸ್ಸಖಾಫ್ ವಹಿಸಿದ್ದರು. ಅಬ್ದುಸ್ಸಲಾಮ್ ಅಹ್ಸನಿ ಉದ್ಘಾಟಿಸಿದರು. ಇದೇ ವೇಳೆ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘಟನೆಯ ನೂತನ ಅಧ್ಯಕ್ಷರಾಗಿ ಲುಕ್ಮಾನುಲ್ ಹಕೀಮ್ ಮದನಿನಗರ, ಪ್ರ. ಕಾರ್ಯದರ್ಶಿಯಾಗಿ ಮುಹಮ್ಮದ್ ಮುಝಮ್ಮಿಲ್ ಹಖ್ ಲಾಡಿ, ಕೋಶಾಧಿಕಾರಿಯಾಗಿ ಅಸೀಲ್ ಕಿನ್ಯಾ, ಉಪಾಧ್ಯಕ್ಷರಾಗಿ ಜುರೈಜ್ ಕೊಡಗು, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ಲಾಹಿ ಝೈದ್ ಫಝಿಲ್ ಅಡ್ಕರೆ, ಕ್ಯಾಂಪಸ್ ಲೀಡರುಗಳಾಗಿ ಹಾಬಿಲ್ ಅಸೈ ಮತ್ತು ಅಬ್ದುಲ್ ರಹಮಾನ್ ಕೊಣಾಜೆ ಆಯ್ಕೆಯಾದರು. ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಅಬ್ದುಲ್ ರಹಮಾನ್ ಅಹ್ಸನಿ, ಅಬ್ದುಲ್ಲಾ ಅಹ್ಸನಿ, ಮುನೀರ್ ಸಖಾಫಿ, ಮಹಮ್ಮದ್ ಕುಂಞಿ ಅಮ್ಜದಿ, ಅಬೂಸ್ವಾಲಿಹ್ ಅಝ್ಹರಿ, ಅಬ್ದುಲ್ ರಹಮಾನ್ ಮರ್ಝೂಖಿ ಅಲ್ ಅಹ್ಸನಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಝಮ್ಮಿಲ್ ಹಖ್ ವಂದಿಸಿದರು.





