ಅಳೇಕಲ ಮಸೀದಿಯ ವಾರ್ಷಿಕ ಮಹಾಸಭೆ; ಪದಾಧಿಕಾರಿಗಳ ನೇಮಕ

ಉಳ್ಳಾಲ: ಅಲ್ ಮಸ್ಜಿದುಲ್ ಜಾಮಿಉಲ್ ಅಮೀನ್ (401) ಅಳೇಕಲ ಇದರ ವಾರ್ಷಿಕ ಮಹಾಸಭೆಯ ಮದ್ರಸ ಹಾಲ್ ನಲ್ಲಿ ಹಂಝ ಹಾಜಿ ಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಪ್ರ ಕಾರ್ಯದರ್ಶಿ ರವೂಫ್ ಹಾಜಿ 2021-23 ವಾರ್ಷಿಕ ವರದಿ ವಾಚಿಸಿ ಅಂಗೀಕರಿಸಲಾಯಿತು. ವಾರ್ಷಿಕ ಲೆಕ್ಕಪತ್ರ ಮಂಡಿಸಲಾಯಿತು. ಹಾಲಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ 2023-25 ನೆ ಸಾಲಿಗೆ ನೂತನ ಸಮಿತಿ ಸದಸ್ಯರನ್ನು ನೇಮಕ ಮಾಡಲಾಯಿತು.
ಅಧ್ಯಕ್ಷರಾಗಿ ಯು ಎಸ್ ಹಂಝ ಹಾಜಿ, ಉಪಾಧ್ಯಕ್ಷ ರಾಗಿ ಫಾರೂಕ್ ಹಾಜಿ, ಪ್ರ. ಕಾರ್ಯದರ್ಶಿಯಾಗಿ ಜಾಫರ್ ಯು ಎಸ್, ಜತೆ ಕಾರ್ಯದರ್ಶಿಯಾಗಿ ಅನ್ಸಾರ್ ಮಲಿಕ್ ಅಳೇಕಲ, ಖಜಾಂಜಿಯಾಗಿ ಯು. ಸಿ. ಇಬ್ರಾಹಿಂ, ಮದ್ರಸ ಸಂಚಾಲಕರಾಗಿ ಅಶ್ರಫ್ ಸುಳ್ಯ, ಮಸೀದಿ ಸಂಚಾಲಕರಾಗಿ ನಝೀರ್, ಸಹ ಸಂಚಾಲಕರಾಗಿ ಸಿದ್ದೀಕ್, ಕೊಟ್ರಸ್ ಸಂಚಾಲಕರಾಗಿ ಆಸಿಫ್ ಇವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಿ 16 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಯಿತು.
Next Story





