ಅಳೇಕಲ : ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಉಳ್ಳಾಲ: ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಮತ್ತು ಮದನಿ ಎಜುಕೇಶನ್ ಅಸೋಸಿಯೇಶನ್ ಅಳೇಕಲ ಉಳ್ಳಾಲ ಇದರ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವು ಸಂಸ್ಥೆಯ.ಕಚೇರಿಯಲ್ಲಿ ನಡೆಯಿತು.
ಅಳೇಕಲ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಎರಡು ಜೊತೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಯಿತು. ನುಸ್ರತುಲ್ ಮಸಾಕಿನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಮುಹಮ್ಮದ್ ತ್ವಾಹಾ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಮದನಿ ವಿದ್ಯಾ ಸಂಸ್ಥೆಯ ನಿವೃತ್ತ ಅಧ್ಯಾಪಕ ಕಮಲಾಕ್ಷ , ಹಳೆ ವಿದ್ಯಾರ್ಥಿ ಅಬ್ಬಾಸ್ ಮಂಚಿಲ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫತ್ತಾಕ್, ಕೋಶಾಧಿಕಾರಿ ಯು ಎಸ್ ಹನೀಫ್ ಹಾಜಿ, ಅಲ್ತಾಫ್ ಯು ಎಚ್, ಯು ಎ ಇಸ್ಮಾಯಿಲ್, ಫಾರೂಕ್ ಮಾರ್ಗತಲೆ, ತ್ವಾಹಾ ಅಳೇಕಲ, ಕೆಎನ್ ಮಹಮ್ಮದ್ ಉಪಸ್ಥಿತರಿದ್ದರು.
ಕೆ ಎಂ ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು , ಯುಪಿ ಹಮೀದ್ ವಂದಿಸಿದರು.
Next Story





