ಸುಳ್ಯದ ನಾಗಪಟ್ಟಣ ವೆಂಟೆಡ್ ಡ್ಯಾಂನ ಎಲ್ಲಾ ಗೇಟ್‍ಗಳು ಓಪನ್

ಸುಳ್ಯ: ಪಯಸ್ವಿನಿ ನದಿಗೆ ಅಡ್ಡಲಾಗಿ ಕಟ್ಟಿದ ಸುಳ್ಯ ನಾಗಪಟ್ಟಣದಲ್ಲಿರುವ ವೆಂಟೆಡ್ ಡ್ಯಾಮ್‍ನ ಎಲ್ಲಾ ಗೇಟ್‍ಗಳನ್ನು ತೆರೆಯಲಾಗಿದೆ.
ಎಲ್ಲಾ 14 ಗೇಟ್‍ಗಳನ್ನು ತೆರೆಯಲಾಗಿದ್ದು ನೀರು ಸರಾಗವಾಗಿ ಹರಿಯುತಿದೆ. ನೀರು ಹೆಚ್ಚಳ ಆದರೂ ಗೇಟ್ ತೆರೆಯದ ಹಿನ್ನಲೆಯಲ್ಲಿ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು . ಬಳಿಕ ಕಾಂಗ್ರೆಸ್ ಮುಖಂಡರಾದ ರಾಧಾಕೃಷ್ಣ ಬೊಳ್ಳೂರು, ರಾಧಾಕೃಷ್ಣ ಪರಿವಾರಕಾನ, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಡ್ಯಾಮ್‍ನ ಗೇಟ್ ತೆರೆಯಲು ಆಗ್ರಹಿಸಿದ್ದರು. ತಹಶೀಲ್ದಾರ್ ಅವರು ಡ್ಯಾಮ್‍ನ ಗೇಟ್‍ಗಳನ್ನು ಕೂಡಲೇ ತೆರೆಯುವಂತೆ ಇಂಜಿನಿಯರ್ ಗಳಿಗೆ ಸೂಚಿಸಿದ್ದರು.
ಈ ಹಿನ್ನಲೆಯಲ್ಲಿ ರಾತ್ರಿಯಿಂದಲೇ ಗೇಟ್‍ಗಳನ್ನು ತೆರೆಯಲು ಆರಂಭಿಸಲಾಗಿತ್ತು. ಇಂದು ಎಲ್ಲಾ ಗೇಟ್‍ಗಳನ್ನು ತೆರೆಯಲಾಗಿದೆ. ಸುಳ್ಯ ನಗರ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ಡ್ಯಾಂನಲ್ಲಿ ಬೇಸಿಗೆಯಲ್ಲಿ ಷಟರ್ ಹಾಕಿ ನೀರು ಶೇಖರಣೆ ಮಾಡಲಾಗುತ್ತದೆ. ಮಳೆಗಾಲ ಅರಂಭವಾದೊಡನೆ ಷಟರ್‍ಗಳು ತೆರೆಯಲಾಗುತ್ತದೆ. ಅದರಂತೆ ಡ್ಯಾಮ್‍ನ ಷಟರ್ ತೆರವು ಮಾಡುವುದಾಗಿ ಸಣ್ಣ ನೀರಾವರಿ ಇಲಾಖೆ ಹಾಗೂ ನಗರ ಪಂಚಾಯತ್ 10 ದಿನದ ಹಿಂದೆ ಮಾಹಿತಿ ನೀಡಿತ್ತು. ಕಳೆದ ರವಿವಾರ ಷಟರ್ ತೆರೆಯಲು ಆರಂಭಿಸಿದ್ದರು.
ಆದರೆ 14 ಷಟರ್ ಗಳ ಪೈಕಿ ಕೇವಲ 4 ಷಟರ್‍ಗಳನ್ನು ಮಾತ್ರ ಪೂರ್ತಿ ತೆರೆಯಲಾಗಿತ್ತು. ಎರಡು ಅರ್ಧಕ್ಕೆ ತೆರೆಯಲಾಗಿತ್ತು. ಉಳಿದ ಗೇಟ್‍ಗಳನ್ನು ತೆರೆದಿರಲಿಲ್ಲ. ಮಳೆ ಹೆಚ್ಚಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಎಲ್ಲಾ ಗೇಟ್‍ಗಳನ್ನು ತೆರೆದು ನದಿಯಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು.