Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್...

ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಮದ್ರಾಸ್‌ಗೆ ಸಮಗ್ರ, ಮಂಗಳೂರು ರನ್ನರ್ ಅಪ್

ವಾರ್ತಾಭಾರತಿವಾರ್ತಾಭಾರತಿ16 Jan 2026 10:47 PM IST
share
ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಮದ್ರಾಸ್‌ಗೆ ಸಮಗ್ರ, ಮಂಗಳೂರು ರನ್ನರ್ ಅಪ್
5 ನೂತನ ಕೂಟ ದಾಖಲೆ

ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಐದು ದಿನಗಳ ಕಾಲ ನಡೆದ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯವು 134 ಅಂಕ ಗಳೊಂದಿಗೆ ಟ್ರೋಫಿಯನ್ನು ಗೆದ್ದುಕೊಂಡಿದೆ. ಮಂಗಳೂರು ವಿಶ್ವವಿದ್ಯಾಲಯವು ಎರಡು ವಿಭಾಗದಲ್ಲಿ 109 ಅಂಕಗಳೊಂದಿಗೆ ರನ್ನರ್ ಅಪ್ ಪ್ರಶಸ್ತಿ ಪಡೆಯಿತು.

ಪುರುಷರ ವಿಭಾಗದಲ್ಲಿ ಮದ್ರಾಸ್ ವಿಶ್ವವಿದ್ಯಾಲಯ(74), ಮಂಗಳೂರು (60), ರೋಹ್ತಕ್ ಎಂಡಿಯು ವಿಶ್ವ ವಿದ್ಯಾಲಯ (29) ಹಾಗೂ ಮಹಿಳೆಯರ ವಿಭಾಗದಲ್ಲಿ ಚಂಡೀಗಢ ವಿಶ್ವವಿದ್ಯಾಲಯ (67), ಮದ್ರಾಸ್ ವಿಶ್ವವಿದ್ಯಾಲಯ (47) ಮತ್ತು ಮಂಗಳೂರು ವಿಶ್ವವಿದ್ಯಾಲಯ (38) ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದವು.

ಕ್ರೀಡಾಕೂಟದ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿಯನ್ನು ಮಹಿಳಾ ವಿಭಾಗದಲ್ಲಿ ಲವ್ಲೀ ಪ್ರೊಫೆಷನಲ್ ವಿಶ್ವವಿದ್ಯಾಲಯದ ಪೂಜಾ (ಹೈಜಂಪ್) ಹಾಗೂ ಪುರುಷರ ವಿಭಾಗದಲ್ಲಿ ಚೆನ್ನೆöÊ ಮದ್ರಾಸ್ ವಿಶ್ವವಿದ್ಯಾಲಯದ ಮೋಹನ್ ರಾಜ್ (ಟ್ರಿಪಲ್ ಜಂಪ್) ಮತ್ತು ಪಂಜಾಬ್ ಆರ್‌ಐಎಂಟಿ ವಿಶ್ವವಿದ್ಯಾಲಯದ ವಿಹ್ವೇಂದ್ರ ಸಿಂಗ್ (20 ಕಿ.ಮೀ. ನಡಿಗೆ) ಪಡೆದರು.

ಕೂಟ ದಾಖಲೆ:-

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ನಡೆದ ಕ್ರೀಡಾಕೂಟದಲ್ಲಿ ಐದು ನೂತನ ಕೂಟ ದಾಖಲೆಗಳಾಗಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 25,000 ರೂಪಾಯಿ ನಗದು ಬಹುಮಾನ ನೀಡಲಾಯಿತು. 4*400 ಮೀಟರ್ಸ್ ಓಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ತಂಡ, 100 ಮೀ. ಓಟದಲ್ಲಿ ಸ್ಯಾಮ್ ವಸಂತ್ (ಕೊಯಂಮುತ್ತೂರು ಭಾರತೀಯರ್ ವಿ.ವಿ.), ಪೋಲ್‌ವಾಲ್ಟ್ನಲ್ಲಿ ಕುಲ್ದೀಪ್ ಯಾದವ್ (ಗ್ವಾಲಿಯರ್ ಐಟಿಎಂ ವಿ.ವಿ.), ಹೈಜಂಪ್‌ನಲ್ಲಿ ಪೂಜಾ (ಲವ್ಲೀ ಪ್ರೊಫೆಷನ್ ವಿ.ವಿ.) ಹಾಗೂ ಹ್ಯಾಮರ್ ಥ್ರೋ ತಾನ್ಯಾ ಚೌಧರಿ (ಚಂಡೀಗಢ ವಿ.ವಿ.) ದಾಖಲೆ ಬರೆದರು.

ಅಂತಿಮ ದಿನ:-

ಕ್ರೀಡಾಕೂಟದ ಅಂತಿಮ ದಿನವಾದ ಶುಕ್ರವಾರ ಮೂರು ಕೂಟ ದಾಖಲೆಗಳಿಗೆ ಸಾಕ್ಷಿಯಾಯಿತು. ಕ್ರೀಡಾಕೂಟದ ಗಮನ ಸೆಳೆದಿದ್ದ 4*400 ಮೀಟರ್ಸ್ ರಿಲೇಯಲ್ಲಿ ನೂತನ ಕೂಟ ದಾಖಲೆ (3:08.45ನಿ.) ಜೊತೆ ಚಿನ್ನ ಗೆದ್ದ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು (ಸ್ವಾಯತ್ತ) ವಿದ್ಯಾರ್ಥಿಗಳಾದ ಸಾಕೇತ್, ಕೇಶವನ್, ಪ್ರಥಮೇಶ್ ಹಾಗೂ ಆಕಾಶ್ ರಾಜ್ ಗೆಲುವಿನ ನಗೆ ಬೀರಿದರು. ಸಾಕೇತ್ ಆರಂಭದಲ್ಲಿ ಉತ್ತಮ ಮುನ್ನಡೆ ನೀಡಿದರೆ, ಕೇಶವನ್ ಅಂತರ ಕಾಯ್ದುಕೊಂಡರು, ಪ್ರಥಮೇಶ್ ವೇಗ ನೀಡಿದರೆ, ಆಕಾಶ್ ರಾಜ್ ಯಶಸ್ವಿಯಾಗಿ ಗುರಿ ತಲುಪಿಸಿದರು.

‘ಆಳ್ವಾಸ್‌ನಲ್ಲಿ ನಮಗೆ ದೊರೆತ ತರಬೇತಿ, ಪ್ರೋತ್ಸಾಹವೇ ಯಶಸ್ಸಿನ ಗುಟ್ಟು’ ಎಂದು ನಾಲ್ವರೂ ವಿಜಯದ ಸಂಕೇತ ಸೂಚಿಸಿದರು.

2024ರಲ್ಲಿ ಕೇರಳ ವಿಶ್ವವಿದ್ಯಾಲಯವು (3:09.31 ನೀ.) ದಾಖಲೆಯನ್ನು ದ್ವಿತೀಯ ಸ್ಥಾನ ಪಡೆದ ಚೆನ್ನೈ ಮದ್ರಾಸ್ ವಿಶ್ವವಿದ್ಯಾಲಯ (3:09.17) ಮುರಿದರೂ, ನೂತನ ಕೂಟ ದಾಖಲೆ ಮಂಗಳೂರು ವಿಶ್ವವಿದ್ಯಾಲಯ ಪಾಲಾಯಿತು.

ಹೈಜಂಪ್:-

‘ಮಂಗಳೂರಿನ ಸಹನಾ ಕುಮಾರಿ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆ (1.92ಮೀ) ಮುರಿಯುವುದೇ ನನ್ನ ಗುರಿ. ಆ ಬಳಿಕ ಏಷಿಯನ್ ದಾಖಲೆ’ ಎಂದು ಗೆಲುವಿನ ನಗೆ ಬೀರಿ ಹೇಳಿದವರು ಲವ್ಲೀ ಪ್ರೊಫೆಷನ್ ವಿಶ್ವವಿದ್ಯಾಲಯದ ಪೂಜಾ. ಅವರು ತಮ್ಮ (2024)ಹಾಗೂ ಮನೋನ್ಮಣಿಯಂ ವಿಶ್ವವಿದ್ಯಾಲಯದ ಗ್ರೇಸಿನಾ ಜಿ. ಮರ‍್ಲಿ (2022) ಹೆಸರಿನಲ್ಲಿದ್ದ (1.84 ಮೀ.) ದಾಖಲೆಯನ್ನು ಮುರಿದರು.

'ನಾನು ಬೆಂಗಳೂರಿನ ಅಂಜು ಜಾರ್ಜ್ ಅಕಾಡೆಮಿಗೆ ಕೃತಜ್ಞನಾಗಿದ್ದೇನೆ. ಆ ದಂಪತಿಯಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು. ಉಜ್ಬೇಕಿಸ್ತಾನದ ಸರಗಯ್ ನನ್ನ ಈಗಿನ ಕೋಚ್. ನಾನು ಈ ಹಿಂದೆ 1.89 ಮೀ ಎತ್ತರ ಜಿಗಿದಿದ್ದೇನೆ. ಏಷಿಯನ್ ಚಾಂಪಿಯನ್‌ಶಿಪ್ ನನ್ನ ಗುರಿ’ ಎಂದುಪೂಜಾ ಭಾವುಕರಾದರು.

ಪೂಜಾ ಹರಿಯಾಣದ ಬೋಸ್ತಿ ಮೂಲದ ಪೂಜಾ ಲವ್ಲೀ ಪ್ರೊಫೆಷನಲ್ ವಿಶ್ವವಿದ್ಯಾಲಯದಲ್ಲಿ ಬಿಪಿಇಎಸ್ ವಿದ್ಯಾರ್ಥಿನಿ.

ಹ್ಯಾಮರ್ ಥ್ರೋ:-

ಚಂಡೀಗಢ ವಿ.ವಿ.ಯ ತನ್ಯಾ ಚೌಧರಿ ಹ್ಯಾಮರ್ ಥ್ರೋನಲ್ಲಿ ತಮ್ಮದೇ 2023ರ ದಾಖಲೆ (62.62ಮೀ.)ಯನ್ನು ಮುರಿದು (65.60ಮೀ.) ನೂತನ ಕೂಟ ದಾಖಲೆ ಬರೆದರು. ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ (ಎಂಪಿಇಎಸ್) ಅಧ್ಯಯನ ಮಾಡುವ ಅವರು, ಸಚಿನ್ ಯಾದವ್ ಬಳಿ ತರಬೇತಿ ಪಡೆಯುತ್ತಿದ್ದಾರೆ.

‘ಕಮಲ್ ಪ್ರೀತ್ ಕೌರ್ (66.59 ಮೀಟರ್ಸ್) ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಗುರಿ ನನ್ನದು. ನನ್ನ ಸಾಧನೆಯಿಂದ ನನ್ನ ಕುಟುಂಬ ಹಾಗೂ ತರಬೇತಿದಾರರು ಖುಷಿಯಾಗುತ್ತಾರೆ.’ ಎಂದು ಸಂತಸ ಹಂಚಿಕೊಂಡರು.

ಪಾರ್ತೀಪಾ ಸೆಲ್ವರಾಜ್:-

ಕೂಟದ ವೇಗದ ಓಟಗಾರ್ತಿಯಾಗಿ ಹೊಮ್ಮಿದ ತಮಿಳುನಾಡಿನ ಪಾರ್ತೀಪಾ ಸೆಲ್ವರಾಜ್, ಅಂತಿಮ ದಿನ 200 ಮೀ, ಓಟದಲ್ಲೂ ಚಿನ್ನ ಗೆದ್ದು, ವೇಗ ಸಾಬೀತು ಪಡಿಸಿದರು.

‘ನಿನಗೆ ಏನು ಸಾಧಿಸಬೇಕು. ಅದನ್ನು ಮುಕ್ತವಾಗಿ ಸಾಧಿಸು. ಯಾರೋ ಏನೋ ಹೇಳುತ್ತಾರೆ ಎಂಬುದು ಬದುಕಿನಲ್ಲಿ ಮುಖ್ಯವೇ ಅಲ್ಲ. ಆದರೆ, ಸುರಕ್ಷಿತವಾಗಿ ಇರು’ ಎಂಬುದು ನಾನು ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಾಗ ಅನ್ನ ಅಪ್ಪ ಅಮ್ಮ ಹೇಳಿದ ಸಾಲು. ಇದುವೇ ನನ್ನ ಪ್ರೇರಣೆ’ ಎಂದು ಸಂತೃಪ್ತ ಭಾವ ಸೂಸಿದರು. ಪಾರ್ತೀಪಾ ಅವರು ಸೇಲಂ ನಮಕ್ಕಲ್‌ನ ಕೃಷಿಕ ದಂಪತಿ ಸುಮತಿ ಮತ್ತು ಸೆಲ್ವರಾಜ್ ದಂಪತಿಯ ಮಗಳು. ಚೆನ್ನೈ ನ ಎಂ.ಒ.ಪಿ ವೈಷ್ಣವಿ ಮಹಿಳಾ ಕಾಲೇಜಿನ ಎಂ.ಎ ಸಂವಹನ ವಿದ್ಯಾರ್ಥಿನಿ.

‘ಓಟದಲ್ಲಿ ನನಗೆ ಭವಿಷ್ಯ ಇದೆ ಎಂದು ನಾನು 6ನೇ ತರಗತಿಯಲ್ಲಿ ಇದ್ದಾಗ ದೈಹಿಕ ಶಿಕ್ಷಕರು ಹೇಳಿದ್ದರು. ಆ ಬಳಿಕ ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ (ಎಸ್‌ಡಿಎಟಿ)ದ ಮೂಲಕ ಉತ್ತಮ ತರಬೇತಿ (ತರಬೇತುದಾರ ಪ್ರದೀಪ್ ಕುಮಾರ್) ಹಾಗೂ ಆಹಾರ ಪಡೆದೆ. ಅದೇ ನನ್ನ ಸಾಧನೆಗೆ ಕಾರಣ. ಒಲಿಂಪಿಕ್ಸ್ ಚಿನ್ನವೇ ನನ್ನ ಗುರಿ’ ಎಂದು ಪಾರ್ತೀಪಾ ಹೇಳಿದರು.

200 ಮೀ ಓಟದ ಚಿನ್ನವನ್ನು ತಮಿಳುನಾಡಿನ ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಗೋಕುಲ್ ಪಾಂಡಿಯನ್ ಗೆದ್ದರು. ಮಧುರೈಯ ಕೃಷಿಕ ದಂಪತಿ ಚೌಕಂಪತ್ತಿ ಚಾಣಿಕರಾಮ್ ಮತ್ತು ಪಾಂಡಿಚೆಲ್ವಿ ಅವರ ಪುತ್ರ. ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ (ಎಸ್‌ಡಿಎಟಿ)ದ ಮೂಲಕ ವಿನೋದ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದಾರೆ.

ಫಲಿತಾಂಶ- ಪುರುಷರ ವಿಭಾಗ:

4*100 ಮೀ. ರಿಲೇ: ಚೆನ್ನೈ ಮದ್ರಾಸ್ ವಿ.ವಿ. (40.69 ಸೆ. ಸಮಯ)-1, ರಾಯಚೂರು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿ.ವಿ. (41.02)-2, ಕೇರಳದ ಕ್ಯಾಲಿಕಟ್ ವಿ.ವಿ. (41.04)-3.

4*400 ಮೀ. ರಿಲೇ: ಮಂಗಳೂರು ವಿಶ್ವವಿದ್ಯಾಲಯ (3:08.45)-1, ಚೆನ್ನೆöÊ ಮದ್ರಾಸ್ ವಿ.ವಿ. (3:09.17)-2, ಚಂಡೀಗಢ ಪಂಜಾಬ್ ವಿ.ವಿ. (3:09:90)-3.

200 ಮೀ. ಓಟ: ಗೋಕುಲ್ ಪಾಂಡಿಯನ್ ಜೆ, ತಮಿಳುನಾಡಿನ ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (21.22ಸೆ. ಸಮಯ)-1, ಪ್ರಸನ್ನ ಕುಮಾರ್ ವಿ ಮನ್ನೂರ್, ಧಾರವಾಡ ವಿ.ವಿ (21.55 (21.547)-2, ಎಸ್. ಆರ್. ರೋಹನ್, ಕೊಟ್ಟಾಯಂ ಎಂ.ಜಿ. ವಿವಿ (21.55 (21.549)-3.

ಲಾಂಗ್ ಜಂಪ್: ಸರುಣ್ ಪಾಯಸಿಂಗ್, ಒಡಿಶಾ ಸಾಂಬಲ್‌ಪುರ್ ವಿ.ವಿ. (7.43 ಮೀ. ದೂರ)-1, ಶರೋನ್ ಜಸ್ಟಸ್, ತಿರುನಲ್ವೇಲ್ ಮನೋನ್ಮಣಿಯಂ ಸುಂದರನಾರ್ (7.29)-2, ಯಶ್ ಖಾನ್ವಿಲ್ಕರ್, ಮುಂಬೈ ವಿ.ವಿ. (7.26) -3.

ಹ್ಯಾಮರ್ ಥ್ರೋ: ಮಹಮ್ಮದ್ ನದೀಂ, ಮಂಗಳೂರು ವಿ.ವಿ. (61.74 ಮೀ. ದೂರ)-1, ಮುತ್ತಪ್ಪ, ಮಂಗಳೂರು ಯೆನೆಪೋಯ ವಿ.ವಿ.(61.00)-2, ಜತಿನ್ ಕುಮಾರ್ ರೆಸ್ಪಾಲ್, ಸಿಕಾರ್ ಪಿಡಿಯುಎಸ್‌ಯು (59.52)-3.

5000 ಮೀ. ಓಟ: ಗೌರವ್, ಉ.ಪ್ರ. ಬರೇಲಿ ಮಹಾತ್ಮ ಜ್ಯೋತಿಬಾಫುಲೆ ವಿ.ವಿ. (14:04.01 ನಿ. ಸಮಯ) -1, ಪ್ರಿನ್ಸೆರಾಜ್ ಯಾದವ್, ರಾಯಚೂರು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿ.ವಿ. (14:04.19)-2, ಸಚಿನ್ ಯಾದವ್, ಪಂಜಾಬ್ ಆರ್‌ಐಎಂಟಿ ವಿ.ವಿ. (14:08.02)-3.

ಮಹಿಳೆಯರ ವಿಭಾಗ:

4*400 ಮೀ.ರಿಲೇ: ಚಂಡೀಗಢ ಪಂಜಾಬ್ ವಿ.ವಿ. (3:42.65 ನಿ. ಸಮಯ)-1, ಚೆನ್ನೆöÊ ಮದ್ರಾಸ್ ವಿ.ವಿ. (3:43.71)-2, ಮಂಗಳೂರು ವಿ.ವಿ. (3:45.26)-3.

4*100 ಮೀ.ರಿಲೇ: ಕೊಟ್ಟಾಯಂ ಎಂಜಿ ವಿ.ವಿ. (46.20 ಸೆ. ಸಮಯ)-1, ಚೆನ್ನೆöÊ ಮದ್ರಾಸ್ ವಿ.ವಿ. (46.44)-2, ಅಮೃತಸರ್ ಗುರುನಾನಕ್ ದೇವ್ ವಿ.ವಿ (46.67)-3.

ಹ್ಯಾಮರ್ ಥ್ರೋ: ತಾನ್ಯಾ ಚೌಧರಿ, ಮೊಹಾಲಿ ಚಂಡೀಗಢs ವಿ.ವಿ. (65.60 ಮೀ. ದೂರ)-1, ನಂದಿನಿ, ಮೊಹಾಲಿ ಚಂಡೀಗಢs ವಿ.ವಿ. (61.84)-2, ಗ್ರೀಮಾ, ಪಂಜಾಬ್ ಲವ್ಲೀ ಪ್ರೊಫೆಷನಲ್ ವಿ.ವಿ. (56.46)-3.

200 ಮೀ. ಓಟ: ಪಾರ್ತೀಪಾ ಸೆಲ್ವರಾಜ್, ಚೆನ್ನೆöÊ ಮದ್ರಾಸ್ ವಿ.ವಿ. (24.11 ಸೆ. ಸಮಯ)-1, ಸ್ರೀನಾ ಎನ್., ಕೊಟ್ಟಾಯಂ ಎಂಜಿ. ವಿ.ವಿ. (24.25)-2, ಸೋನಿಯಾ, ಮೊಹಾಲಿ ಪಂಜಾಬ್ ವಿ.ವಿ.(24.38)-3.

ಹೈಜಂಪ್: ಪೂಜಾ, ಪಂಜಾಬ್ ಲವ್ಲೀ ಪ್ರೊಫೆಷನಲ್ ವಿ.ವಿ. (1.85 ಮೀ. ಎತ್ತರ), ಜೋನಿಕಾ ಪಹಲ್, ಮೊಹಾಲಿ ಚಂಡೀಗಢ ವಿ.ವಿ. (1.72)-2, ಜಮೋದ್ ಪಾಯಲ್‌ಬೆನ್, ವಡೋದರಾ ಸ್ವರ್ಣಿಮಾ ಗುಜರಾತ್ ಸ್ಪೋರ್ಟ್ಸ್ ವಿ.ವಿ.(1.72)-3.

5000 ಮೀ. ಓಟ: ಸೋನಿ ದೇವಿ, ರಾಯಚೂರು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿ.ವಿ. (16:50.98 ನಿ. ಸಮಯ)-1, ಪೌರ್ಣಮಿ, ಕೊಟ್ಟಾಯಂ ಎಂ.ಜಿ. ವಿ.ವಿ. (16:51:62)-2, ಮಿಲಾಲಿ ದೀಪಕ್ ಭೋಯಾರ್, ನಾಗ್ಪುರ ರಾಷ್ಟ್ರಕವಿ ತುಕೋಜಿ ಮಹಾರಾಜ್ ವಿ.ವಿ. (16:51:71)-3.

ಅಂತರರಾಷ್ಟ್ರೀಯ ಆಯೋಜನೆಗೆ ಆಳ್ವಾಸ್ ಸಮರ್ಥ: ಕೋಟ್ಯಾನ್

ಮೂಡುಬಿದಿರೆ: ‘ಡಾ.ಎಂ. ಮೋಹನ ಆಳ್ವ ನೇತೃತ್ವದ ಆಳ್ವಾಸ್ ತಂಡವು ಮಾದರಿಯಾಗಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸುವಷ್ಟು ಸಶಕ್ತವಾಗಿದೆ. ಈ ಕ್ರೀಡಾಕೂಟ ಯಶಸ್ವಿಯಾಗಿದ್ದು, ಮೂಡುಬಿದಿರೆಗೆ ಇನ್ನಷ್ಟು ಕಾರ್ಯಕ್ರಮಗಳು ಬರಲಿ ಎಂದು ಶಾಸಕ ಉಮಾನಥ ಕೋಟ್ಯಾನ್ ಹೇಳಿದರು.

ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ ಸಮಾರೋಪ ಮತ್ತು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೆನರಾ ಬ್ಯಾಂಕ್ ಪ್ರಧಾನ ಪ್ರಬಂಧಕ ಮಂಜುನಾಥ ಬಿ. ಸಿಂಗ್ ಮಾತನಾಡಿ, ‘ಆಳ್ವಾಸ್ ಹಾಗೂ ಕೆನರಾ ನಂಟು 40 ವರ್ಷಗಳಿಂದ ಇದೆ. ಆರೋಗ್ಯಕರ ದೇಹವೇ ಮಾನಸಿಕ ಆರೋಗ್ಯಕ್ಕೆ ಕಾರಣ. ಎಲ್ಲರೂ ಆರೋಗ್ಯಕರ ಜೀವನ ನಡೆಸಿ’ ಎಂದು ಹಾರೈಸಿದರು.

ಕ್ರೀಡಾಕೂಟದ ವೀಕ್ಷಕರಾದ ಡಾ. ಯು.ವಿ. ಶಂಕರ್ ಮಾತನಾಡಿ, `ಕ್ರೀಡಾ ಕೂಟದ ಯಶಸ್ಸಿಗೆ ಆಳ್ವಾಸ್ ತಂಡಕ್ಕೆ ಅಭಿನಂದನೆ. ಇದು ಆಳ್ವಾಸ್ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಾಧನೆ’ ಎಂದರು.

‘ಕೇವಲ ಈ ಕ್ರೀಡಾಕೂಟ ಮಾತ್ರವಲ್ಲ, ಒಟ್ಟಾರೆ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿರುವ ಡಾ.ಎಂ. ಮೋಹನ ಆಳ್ವ ಅವರಿಗೆ ಭಾರತೀಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಧನ್ಯವಾದ ಸಲ್ಲಿಸುತ್ತದೆ’ ಎಂದರು.

‘ಇದು ನಾನು ನೋಡಿದ ಅತ್ಯುತ್ತಮ ಕ್ರೀಡಾಕೂಟ. ಅಥ್ಲೀಟ್‌ಗಳು ಬಹುತೇಕ ಬಡವರಾಗಿರುತ್ತಾರೆ. ಅವರಿಗೆ ಆಳ್ವರು ಘೋಷಿಸಿದ ನಗದು ಬಹುಮಾನ ದೊಡ್ಡ ಬೆಂಬಲ’ ಎಂದು ಶ್ಲಾಘಿಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಎಂಸಿಎಸ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಮೀನಾಕ್ಷಿ ಆಳ್ವ ಇದ್ದರು. ವಿಜೇತ ತಂಡ ಹಾಗೂ ವೈಯಕ್ತಿಕ ಬಹುಮಾನಗಳನ್ನು ವಿತರಿಸಲಾಯಿತು. ಡಾ. ವಸಂತ ಡಾ.ರಾಮಚಂದ್ರ ಹಾಗೂ ಎ.ಎಲ್. ಮುತ್ತು ಕಾರ್ಯಕ್ರಮ ನಿರೂಪಿಸಿದರು.

ಫಲ ನೀಡಿದ ಎಸ್‌ಡಿಎಟಿ ಶ್ರಮ

ಕ್ರೀಡಾಕೂಟದಲ್ಲಿ ಮದ್ರಾಸ್ ವಿಶ್ವವಿದ್ಯಾಲಯವು ಸಮಗ್ರ ಪ್ರಶಸ್ತಿ ಪಡೆದರೆ, ತಮಿಳುನಾಡಿನ ಇತರರ ವಿ.ವಿ.ಗಳೂ ಉತ್ತಮ ಸಾಧನೆ ಮಾಡಿದವು. ಈ ಕುರಿತು ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ (ಎಸ್‌ಡಿಎಟಿ)ದ ತರಬೇತುದಾರ ವಿನೋದ್ ಕುಮಾರ್ ಪ್ರತಿಕ್ರಿಯಿಸಿ, ‘ತಮಿಳುನಾಡು ಸರ್ಕಾರವು ಎಸ್‌ಡಿಎಟಿ ಮೂಲಕ ಹಿರಿಯ ಪ್ರಾಥಮಿಕ ಶಾಲೆಯಲ್ಲೇ ಕ್ರೀಡಾಪಟುಗಳನ್ನು ಗುರುತಿಸಿ ಚೆನ್ನೆöÊಯ ನೆಹರೂ ಕ್ರೀಡಾಂಗಣದಲ್ಲಿ ಅತ್ಯುತ್ತಮ ತರಬೇತಿ ಹಾಗೂ ಆಹಾರ ಮತ್ತು ಹಾಸ್ಟೆಲ್ ನೀಡುತ್ತಿದೆ. ಅಧಿಕೃತ ರಾಷ್ಟಿçÃಯ ಮಟ್ಟದ ಕ್ರೀಡೆಯಲ್ಲಿ ಗೆದ್ದವರಿಗೆ ಪ್ರಥಮ-5 ಲಕ್ಷ, ದ್ವಿತೀಯ- 3ಲಕ್ಷ ಹಾಗೂ ತೃತೀಯ 2ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ. ವಿ.ವಿ. ಸೇರಿದಂತೆ ಪ್ರಮುಖ ಕ್ರೀಡಾಕೂಟಗಳಲ್ಲಿ ಗೆದ್ದವರಿಗೆ ಹಲವಾರು ನಗದು ಬಹುಮಾನಗಳಿವೆ’ ಎಂದು ವಿವರಿಸಿದರು.

ಮಂಗಳೂರು ವಿಶ್ವವಿದ್ಯಾಲಯಕ್ಕೆ 16 ಪದಕ

ಕ್ರೀಡಾಕೂಟದ ಅಂತಿಮ ದಿನ ಮಂಗಳೂರು ವಿಶ್ವವಿದ್ಯಾಲಯವು ಎರಡು ಚಿನ್ನ ಹಾಗೂ ಒಂದು ಕಂಚು ಗೆದ್ದಿತು. ಒಟ್ಟು ಪದಕ ಪಟ್ಟಿಯಲ್ಲಿ ಆರು ಚಿನ್ನ, ಐದು ಬೆಳ್ಳಿ ಹಾಗೂ ಐದು ಕಂಚು ಸೇರಿದಂತೆ 16 ಪದಕ ಪಡೆಯಿತು.

4* 400 ಮೀಟರ್ಸ್ ಮಿಕ್ಸೆಡ್ ರಿಲೇ: (ಚಿನ್ನ) ಮತ್ತು ಮಹಿಳಾ ವಿಭಾಗದಲ್ಲಿ 10,000 ಮೀಟರ್ಸ್ ಓಟ: ನಿರ್ಮಲಾ (ಚಿನ್ನ), ಹಾಫ್ ಮ್ಯಾರಥಾನ್: ಭಾಗೀರಥಿ (ಚಿನ್ನ), 400 ಮೀ. ಹರ್ಡಲ್ಸ್: ದೀಕ್ಷಿತಾ ರಾಮ ಗೌಡ (ಬೆಳ್ಳಿ), ಲಾಂಗ್ ಜಂಪ್: ಶ್ರೀದೇವಿಕಾ ವಿ.ಎಸ್. (ಬೆಳ್ಳಿ), 4*400 ಮೀ.ರಿಲೇ: ಮಂಗಳೂರು ವಿ.ವಿ. (ಕಂಚು) ಹಾಗೂ ಪುರುಷರ ವಿಭಾಗದಲ್ಲಿ ಹ್ಯಾಮರ್ ಥ್ರೋ: ಮಹಮ್ಮದ್ ನದೀಂ (ಚಿನ್ನ), 4*400 ಮೀ. ರಿಲೇ: ಸಾಕೇತ್, ಕೇಶವನ್, ಪ್ರಥಮೇಶ್ ಹಾಗೂ ಆಕಾಶ್ ರಾಜ್-ತಂಡ (ಚಿನ್ನ), ಡಿಸ್ಕಸ್ ಥ್ರೋ: ಉಜ್ವಲ್ ಚೌಧರಿ(ಚಿನ್ನ), ನಾಗೇಂದ್ರ ಅಣ್ಣಪ್ಪ ನಾಯ್ಕ(ಕಂಚು), 100 ಮೀ. ಓಟ: ವಿಭಾಸ್ಕರ್ ಕುಮಾರ್ (ಬೆಳ್ಳಿ), 400 ಮೀ. ಹರ್ಡಲ್ಸ್: ಆರ್ಯನ್ ಪ್ರಜ್ವಲ್ ಕಶ್ಯಪ್ (ಬೆಳ್ಳಿ), 800 ಮೀ. ಓಟ: ಪ್ರಥಮೇಶ್ ಅಮರಿಸ್ಲಾ ದಿಯೋರಾ (ಬೆಳ್ಳಿ), ಶಾಟ್‌ಪುಟ್: ಅನಿಕೇತ್ (ಕಂಚು), ಡೆಕಥ್ಲಾನ್: ಚಮನ್‌ಜ್ಯೋತ್ ಸಿಂಗ್ (ಕಂಚು), 400 ಮೀಟರ್ಸ್ ಓಟ: ಆಕಾಶ್ ರಾಜ್ ಎಸ್.ಎಂ. (ಕಂಚು) ಸ್ಥಾನ ಪಡೆದಿದ್ದಾರೆ.







Tags

All IndiaInter-UniversityAthleticsChampionship
share
ವಾರ್ತಾಭಾರತಿ
ವಾರ್ತಾಭಾರತಿ
Next Story
X