ಮಂಗಳೂರು| ಎ.ಆರ್.ಎಂ ಕಿಯಾ ಶೋರೂಮ್‌ನಲ್ಲಿ ನೂತನ ʼಕಿಯಾ ಸೆಲ್ಟೋಸ್ ಕಾರುʼ ಅನಾವರಣ

ಮಂಗಳೂರು: ನಗರದ ಕದ್ರಿ ಮಲ್ಲಿಕಟ್ಟೆಯ ಎ.ಆರ್.ಎಂ ಕಿಯಾ ಶೋರೂಮ್‌ನಲ್ಲಿ ನೂತನ ಕಿಯಾ ಸೆಲ್ಟೋಸ್ ಕಾರನ್ನು ಶುಕ್ರವಾರ ಅನಾವರಣಗೊಳಿಸಲಾಯಿತು. ಆ ಮೂಲಕ ಕರಾವಳಿಗರಿಗೆ ಈ ಜನಪ್ರಿಯ ಎಸ್‌ಯುವಿ ಇತ್ತೀಚಿನ ಆವೃತ್ತಿಯು ಪದಾರ್ಪಣೆ ಮಾಡಿದಂತಾಗಿದೆ. ಈ ಕಾರಿನ ಆರಂಭಿಕ ಬೆಲೆಯು 10.99 ಲಕ್ಷ ರೂ.ಗಳಾಗಿವೆ.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಾರ್ಟರ್ಡ್ ಅಕೌಂಟೆಂಟ್ ಮತ್ತು ’ಕಾಮತ್ ಅಂಡ್ ರಾವ್’ ಸಂಸ್ಥೆಯ ಆಡಳಿತ ಪಾಲುದಾರ ಶ್ರೀನಿವಾಸ್ ಎಸ್. ಕಾಮತ್ ನೂತನ ಕಾರನ್ನು ಅನಾವರಣಗೊಳಿಸಿದರು.
ಈ ಸಂದರ್ಭ ಎ.ಆರ್.ಎಂ ಕಿಯಾ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಅರೂರ್ ಗಣೇಶ್ ರಾವ್, ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಅರೂರ್ ವರುಣ್ ರಾವ್, ಎಚ್.ಆರ್. ನಿರ್ದೇಶಕ ಅರೂರ್ ವಿಕ್ರಮ್ ರಾವ್, ಹಿರಿಯ ಉಪಾಧ್ಯಕ್ಷ ಪ್ರದೀಪ್ ಪೈ, ಎಜಿಎಂ (ವಿಎಎಸ್) ಕನಕ ಕುಮಾರ್, ಮಾರಾಟ ವಿಭಾಗದ ಎಜಿಎಂ ಹರೀಶ್ ರಾವ್, ಮಾರಾಟ ಮತ್ತು ಎಚ್.ಆರ್ ವಿಭಾಗದ ಜಿಎಂ ಶಶಿಕುಮಾರ್ ಉಡುಪಿ ಹಾಗೂ ಮಾರಾಟ ವ್ಯವಸ್ಥಾಪಕ ಜಯಪ್ರಕಾಶ್ ಉಪಸ್ಥಿತರಿದ್ದರು.
ನೂತನ ಕಿಯಾ ಸೆಲ್ಟೋಸ್ ಕಾರು ನವೀನ ವಿನ್ಯಾಸ, ಸುಧಾರಿತ ತಾಂತ್ರಿಕ ವೈಶಿಷ್ಟ್ಯಗಳು ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಒಳಗೊಂಡಿದೆ. ಮಿಡ್-ಸೈಝ್ ಎಸ್‌ಯುವಿ ವಿಭಾಗದಲ್ಲಿ ಶೈಲಿ, ತಂತ್ರಜ್ಞಾನ ಮತ್ತು ಸೌಕರ್ಯವನ್ನು ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ.
ಈ ಕಾರು ವಾಹನ ಪ್ರೇಮಿಗಳು ಮತ್ತು ಸ್ಥಳೀಯ ಗ್ರಾಹಕರ ಗಮನ ಸೆಳೆದಿದೆ. ಮಂಗಳೂರಿನ ಶೋರೂಮ್‌ನಲ್ಲಿ ಹೊಸ ಸೆಲ್ಟೋಸ್‌ಗಾಗಿ ಬುಕ್ಕಿಂಗ್ ಮತ್ತು ವಿಚಾರಣೆಗಳು ಈಗಾಗಲೇ ಆರಂಭವಾಗಿವೆ ಎಂದು ಎ.ಆರ್.ಎಂ ಕಿಯಾ ತಿಳಿಸಿದೆ.







