ಮಂಗಳೂರು: ಅಲೋಶಿಯಸ್ ವಿಶ್ವವಿದ್ಯಾನಿಲಯಕ್ಕೆ 17 ಯುಎಸ್ ವಿವಿ ಪ್ರತಿನಿಧಿಗಳ ಭೇಟಿ

ಮಂಗಳೂರು, ಫೆ.15: ಜಾಗತಿಕ ಶೈಕ್ಷಣಿಕ ಉತ್ಕೃಷ್ಟತೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ಸಹಯೋಗ ಕೋಶದಿಂದ ಶಿಕ್ಷಣ ವ್ಯಾಪಾರ ಮಿಷನ್ - ಅಂತಾರಾಷ್ಟ್ರೀಯ ಅಧ್ಯಯನಗಳಿಗೆ ಅವಕಾಶಗಳು ಮತ್ತು ಬೆಂಬಲ ಎಂಬ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮವು ಯು.ಎಸ್.ಎ.ಯ 17 ವಿಶ್ವವಿದ್ಯಾನಿಲಯಗಳ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.
ಪ್ರತಿನಿಧಿಗಳು 300ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಾದಾತ್ಮಕ ಅಧಿವೇಶನ ನಡೆಸಿದರು. ಉನ್ನತ ಶಿಕ್ಷಣದ ನಿರೀಕ್ಷೆಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಿದರು.
ಪ್ರಾಧ್ಯಾಪಕಿ ಡಾ. ರೆನಿಟಾ ಡಿಸೋಜ ಕಾರ್ಯಕ್ರಮ ನಿರೂಪಿಸಿ, ಕಾರ್ಯಕ್ರಮದ ಸಂವಾದ ನೆರವೇರಿಸಿದರು.
ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಡೀನ್ ಡಾ.ಮೆಲ್ವಿನ್ ಡಿಕುನ್ಹಾ ಸಂಸ್ಥೆಯ ಸುಪ್ರಸಿದ್ಧ ಪರಂಪರೆ, ಮೂಲಸೌಕರ್ಯಗಳ ಸಾಮರ್ಥ್ಯ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯದ ಸ್ಥಾನಮಾನಕ್ಕೆ ಪರಿವರ್ತನೆಯ ಪ್ರಯಾಣದ ಕುರಿತು ವಿವರಿಸಿದರು.
Next Story







