ಸಿಇಟಿ: ಅಗ್ರ 10 ರ್ಯಾಂಕ್ ಪಟ್ಟಿಯಲ್ಲಿ ಆಳ್ವಾಸ್, ಎಕ್ಸ್ಪರ್ಟ್, ಎಕ್ಸಲೆಂಟ್ ವಿದ್ಯಾರ್ಥಿಗಳು ಮೇಲುಗೈ

ಸಫಲ್ ಎಸ್ ಶೆಟ್ಟಿ / ಸಿದ್ದೇಶ್ ಬಿ ದಮ್ಮಾಲಿ / ಸಾಯಿಶ್ ಶ್ರವಣ್ ಪಂಡಿತ್ / ವಚನ್ ಎಲ್.ಎ
ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಎ.15 ಮತ್ತು 16 ರಂದು ನಡೆಸಲಾದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ ) ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜು, ಮೂಡುಬಿದಿರೆಯ ಆಳ್ವಾಸ್ ಹಾಗೂ ಕಲ್ಲಬೆಟ್ಟುವಿನ ಎಕ್ಸ್ಲೆಂಟ್ನ ವಿದ್ಯಾರ್ಥಿಗಳು ಹಲವು ರ್ಯಾಂಕ್ ಗಳನ್ನು ಗಳಿಸುವ ಮೂಲಕ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಅಗ್ರಿಕಲ್ಚರ್ನಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಕ್ಷಯ್ ಎಂ ಹೆಗ್ಡೆ 98.08 ಅಂಕಗಳನ್ನು ಪಡೆದು ಮೊದಲ ರ್ಯಾಂಕ್ ಗಳಿಸಿದ್ದಾರೆ.
ವಳಚ್ಚಿಲ್ನ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಸಾಹಿಸ್ ಶ್ರವಣ್ ಪಂಡಿತ್( 97.92) ದ್ವಿತೀಯ ರ್ಯಾಂಕ್, ಅದೇ ಕಾಲೇಜಿನ ಸುಚಿತ್ ಪಿ ಪ್ರಸಾದ್ ( 97.92) ಮೂರನೇ ರ್ಯಾಂಕ್, ಸ್ನೇಹ ಐ ಯಾರಗಾನ್ವಿ( 97.33) ಅವರಿಗೆ ಐದನೇ ರ್ಯಾಂಕ್ , ಸಿದ್ದೇಶ್ ಬಿ ದಮ್ಮಾಲಿ (97.00) ಏಳನೇ ರ್ಯಾಂಕ್ , ನಿಖಿಲ್ ಸೊನ್ನಾದ್( 96.96) ಎಂಟನೆ ರ್ಯಾಂಕ್ ಮತ್ತು ವಚನ್ ಎಲ್.ಎ ( 96.92) ಹತ್ತನೇ ರ್ಯಾಂಕ್ ಹಾಗೂ ಕೊಡಿಯಾಲ್ಬೈಲ್ ಎಕ್ಸ್ಪರ್ಟ್ ಪಿಯು ವಿದ್ಯಾರ್ಥಿ ಕೆ.ರೆಹಾನ್ ಮುಹಮ್ಮದ್ ( 96.92) ಒಂಬತ್ತನೇ ರ್ಯಾಂಕ್ ಗಳಿಸಿದ್ದಾರೆ.
ವೆಟನರಿಯಲ್ಲಿ ವಳಚ್ಚಿಲ್ ಎಕ್ಸ್ಪರ್ಟ್ ಪಿಯು ಕಾಲೇಜಿನ ಸಫಲ್ ಎಸ್ ಶೆಟ್ಟಿ( 178.00) ಮೂರನೇ , ಮೂಡುಬಿದಿರೆ ಕಲ್ಲಬೆಟ್ಟುವಿನ ಎಕ್ಸೆಲೆಂಟ್ ಪಿಯು ಕಾಲೇಜಿನ ನೂತನ್ ಕೃಷ್ಣ ಡಿ ಭೈರವೇಶ್(178.00) ಆರನೇ ರ್ಯಾಂಕ್ ಗಳಿಸಿದ್ದಾರೆ.
ನರ್ಸಿಂಗ್ನಲ್ಲಿ ವಳಚ್ಚಿಲ್ ಎಕ್ಸ್ಪರ್ಟ್ ಪಿಯುನ ಸಫಲ್ ಎಸ್ ಶೆಟ್ಟಿ (178.00) ಮೂರನೇ , ಮೂಡುಬಿದಿರೆ ಕಲ್ಲಬೆಟ್ಟುವಿನ ಎಕ್ಸಲೆಂಟ್ ಪಿಯು ಕಾಲೇಜಿನ ನೂತನ್ ಕೃಷ್ಣ ಭೈರವೇಶ್ ಡಿ (178.00) ಆರನೇ ರ್ಯಾಂಕ್ ಪಡೆದಿದ್ದಾರೆ.
ಬಿಎನ್ವೈಎಸ್ನಲ್ಲಿ ವಳಚ್ಚಿಲ್ ಎಕ್ಸ್ಪರ್ಟ್ಪಿಯುನ ಸಫಲ್ ಎಸ್ ಶೆಟ್ಟಿ( 99.28) ಮೂರನೇ ,ಮೂಡುಬಿದಿರೆ ಕಲ್ಲಬೆಟ್ಟುವಿನ ನೂತನ್ ಕೃಷ್ಣ ಭೈರವೇಶ್ ಡಿ (98.94) ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ. ವೆಟರ್ನರಿ ಪ್ರಾಕ್ಟಿಕಲ್ನಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಕ್ಷಯ್ ರಾಜೇಂದ್ರ ತಹಸೀಲ್ದಾರ್(136.56) ಆರನೇ ರ್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ಇಂಜಿನಿಯರಿಂಗ್ನಲ್ಲಿ ಮೂಡುಬಿದರೆಯ ಎಕ್ಸ್ಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಶಿಶಿರ್ ಎಚ್ ಶೆಟ್ಟಿ(98.61) ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ.