ದಿ.ಆಲ್ವಿನ್ ಜೆರೋಮ್ ಫೆರ್ನಾಂಡಿಸ್ ಸ್ಮರಣಾರ್ಥ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು, ಜ. 18: ದಿವಂಗತ ಆಲ್ವಿನ್ ಜೆರೋಮ್ ಫೆರ್ನಾಂಡಿಸ್ ಸ್ಮರಣಾರ್ಥ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ರವಿವಾರ ಮಂಗಳೂರಿನ ಮಿಲಾಗ್ರೆಸ್ ಚರ್ಚ್ ಹಾಲ್‌ನಲ್ಲಿ ನಡೆಯಿತು.
ಕ್ಯಾಥೊಲಿಕ್ ಸಭಾ, ಲೇಡಿ ಆಫ್ ಮಿಲಾಗ್ರೆಸ್ ಚರ್ಚ್, ಭಾರತೀಯ ಕ್ಯಾಥೊಲಿಕ್ ಸಭಾ ಯುವ ಘಟಕ,ಭಾರತೀಯ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್, ಯುವ ರೆಡ್ ಕ್ರಾಸ್ ಘಟಕ, ಎನ್‌ಎಸ್‌ಎಸ್ ಘಟಕ ಮತ್ತು ಸಮಾಜಶಾಸ್ತ್ರ ಅರ್ಥಶಾಸ್ತ್ರ ವೇದಿಕೆ ರೋಶನಿ ನಿಲಯ (ಸ್ವಾಯತ್ತ), ಸೈಂಟ್ ಅಲೋಶಿಯಸ್ ಪರಿಗಣಿತ ವಿವಿ ಮತ್ತು ಮಿಲಾಗ್ರೆಸ್ ಕಾಲೇಜ್ ಆಫ್ ನರ್ಸಿಂಗ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರವನ್ನು ಲೇಡಿ ಆಫ್ ಮಿಲಾಗ್ರೆಸ್ ಚರ್ಚ್‌ನ ಧರ್ಮ ಗುರು ಫಾ. ಬೊನಾವೆಂಚರ್ ನಜರೆತ್ ಉದ್ಘಾಟಿಸಿದರು.
ಸಮಾರಂಭದಲ್ಲಿ ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಡೇವಿಡ್ ಪಿರೇರಾ, ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರ ವೇದಿಕೆಯ ಸಂಯೋಜಕ ಡಾ. ಕಿರಣ್ ಪ್ರಸಾದ್.ಬಿ, ರೋಶನಿ ನಿಲಯದ ಸಮಾಜ ಕಾರ್ಯ ಶಾಲೆಯ ಎನ್‌ಎಸ್‌ಎಸ್ ಕಾರ್ಯ ಕ್ರಮ ಅಧಿಕಾರಿ ಡಾ. ಪ್ರಶಾಂತ್ ಭಟ್, ರೋಶನಿ ನಿಲಯದ ಸಮಾಜ ಕಾರ್ಯ ಶಾಲೆಯ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ.ಅನುಸೂಯಾ ಕಾಮತ್, ಮಿಲಾಗ್ರಿಸ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲ ಡಾ. ಡಯಾನಾ ಲೋಬೊ, ಮಿಲಾಗ್ರಿಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಡಿಕ್ಸನ್ ಡಿ ಸೋಜ ಉಪಸ್ಥಿತರಿದ್ದರು.
ದಿನಪೂರ್ತಿ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಧರ್ಮಗುರುಗಳು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಕ್ಯಾಥೊಲಿಕ್ ಸಭಾ ಮಿಲಾಗ್ರಿಸ್ ಘಟಕದ ಸಂಚಾಲಕ ವಲೇರಿಯನ್ ಡಿ ಸೋಜ ಸ್ವಾಗತಿಸಿದರು, ಕ್ಯಾಥೊಲಿಕ್ ಸಭಾ ಕಾರ್ಯದರ್ಶಿ ಸ್ಟೀಫನ್ ರಾಜೇಶ್ ಮೊಂತೆರೊ ವಂದಿಸಿದರು.







