ಅಂಗರಗುಡ್ಡೆ ರಿಫಾಯಿ ದಫ್ ರಾತೀಬ್, ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧೆ ಸಮಾರೋಪ

ಮುಲ್ಕಿ: ಅಲ್-ಮದರಸತುಲ್ ಬದ್ರಿಯಾ ಜುಮ್ಮಾ ಮಸೀದಿ ಜಮಾತ್ ಕಮಿಟಿ ಹಾಗೂ ಬದ್ರಿಯಾ ದಫ್ ಕಮಿಟಿ ಬದ್ರಿಯಾ ನಗರ ಅಂಗರಗುಡ್ಡೆ ಇದರ ವತಿಯಿಂದ 11ನೇ ವರ್ಷದ ವಾರ್ಷಿಕ ಸ್ವಲಾತ್, ಧಾರ್ಮಿಕ ಉಪನ್ಯಾಸ, ಆಧ್ಯಾತ್ಮಿಕ ಮಜ್ಲಿಸುನ್ನೂರ್, ರಿಪಾಯಿ ದಫ್ ರಾತಿಬ್, ಅಂತರ್ ರಾಜ್ಯ ಮಟ್ಟದ ದಫ್ ಸರ್ಧೆ ಹಾಗೂ ಸಮಾರೋಪ ಸಮಾರಂಭವು ಶನಿವಾರ ರಾತ್ರಿ ಮಸೀದಿ ವಠಾರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು,
ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಯುವಕರು, ವಿದ್ಯಾರ್ಥಿಗಳಿಗೆ ತಿಳಿಹೇಳುವ ಮೂಲಕ ಮುಂದಿನ ತಲೆಮಾರಿಗೂ ಪರಿಚಯಿಸಬೇಕು. ಎಲ್ಲರೂ ಜಾತಿ ಧರ್ಮಗಳನ್ನು ಬದಿಗಿಟ್ಟು ಒಗ್ಗಟ್ಟಾಗ ಬೇಕು. ಪ್ರಥಮವಾಗಿ ನಮ್ಮ ಮನೆಯಿಂದಲೇ ದ್ವೇಷ, ದುಷ್ಚಟತನ ಅಳಿಸುವ ಪ್ರಯತ್ನಗಳಾದರೆ ದೇಶವೇ ದ್ವೇಷ, ದುಷ್ಚಟತನದಿಂದ ಮುಕ್ತವಾಗಲಿದೆ. ಉಲಮಾಗಳ ಮಾರ್ಗದರ್ಶನದಲ್ಲಿ ಸಮುದಾಯ ಮುಂದೆ ಸಾಗಿದರೆ ಊರಿಗೆ, ಸಮುದಾಯಕ್ಕೆ ಉಜ್ವಲ ಭವಿಷ್ಯವಿರಲಿದೆ ಎಂದರು.
ಅಂಗರಗುಡ್ಡೆಯ ಈ ಕಾರ್ಯಕ್ರಮಕ್ಕೆ ಸ್ಥಳೀಯ ಸರ್ವ ಧರ್ಮೀಯ ಬಾಂದವರ ಕೊಡುಗೆಗಳೇ ಊರಿನ ಸೌಹಾರ್ದವನ್ನು ತಿಳಿಸುತ್ತಿದೆ. ಯಾವುದೇ ಧರ್ಮದ ಧಾರ್ಮಿಕ ನಂಬಿಕೆಗಳು ಆ ಧರ್ಮೀಯರ ದೌರ್ಬಲ್ಯ ಅಲ್ಲ ಎಂದು ಅವರು, ನಮ್ಮ ಸಂಸ್ಕೃತಿ ಎಲ್ಲಾ ಧರ್ಮ, ಮನುಷ್ಯರ ನಡುವಿನ ರೋಗ ಗುಣಪಡಿಸುವ ಔಷಧಗಳಾಗಬೇಕು ಎಂದು ಹೇಳಿದರು.
ಸಮಸ್ತ ಕೇಂದ್ರ ಮುಷಾವರದ ಸದಸ್ಯರು, ಮುಲ್ಕಿ ಶಾಫಿ ಜುಮಾ ಮಸೀದಿಯ ಮುದರ್ರಿಸ್ ಉಸ್ಮಾನ್ ಫೈಝಿ ತೋಡಾರು ಸಮಾರಂಭವನ್ನು ಉದ್ಘಾಟಿಸಿದರು. ಅಂಗರಗುಡ್ಡೆ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ನಿಸಾರ್ ಅಹ್ಮದ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಅಂಗರಗುಡ್ಡೆ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರು ಹಾಗೂ ಮುದರ್ರಿಸ್ ಎ.ಎಂ ಜಾಬೀರ್ ಫೈಝಿ ಮುಖ್ಯ ಭಾಷಣಗೈದರು. ಅಂಗರಗುಡ್ಡೆ ಬದ್ರಿಯಾ ದಫ್ ಕಮಿಟಿಯ ಅಧ್ಯಕ್ಷ ನವಾಝ್ ಸ್ವಾಗತ ಭಾಷಣಗೈದರು.
ಅಸ್ಸಯ್ಯದ್ ಶಿಬ್‌ಲೀ ತಂಙಳ್ ಅಲ್ ಬುಖಾರಿ ಕಣ್ಣೂರ್ ಕೇರಳ ಅವರು ದುವಾ ಆಶೀರ್ವಚನಗೈದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಕರಾವಳಿಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಎಸ್.ಡಿ.ಪಿ.ಐ ಗ್ರಾಮೀಣ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ದ.ಕ. ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಇಕ್ಬಾಲ್ ಅಹ್ಮದ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಸಮಾಜ ಸೇವಕರಾದ ಹಾಜಿ ಅಹ್ಮದ್ ಕಲ್ಕರೆ, ಮುಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತು ಬಾವು ಕಾರ್ನಾಡ್, ಪುನರೂರು ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಪುನರೂರು, ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮನೋಹರ್ ಕೋಟ್ಯಾನ್, ಕಿನ್ನಿಗೋಳಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಟಿ.ಎಚ್ ಮಯ್ಯದ್ದಿ, ಅಂಗರಗುಡ್ಡೆ ಉದ್ಯಮಿಗಳಾದ ಉಮೇಶ್ ಆಚಾರಿ, ಪವನ್ ಕುಮಾರ್, ನೌಫಲ್ ಕಲ್ಕರೆ, ಕೃಷಿಕ ರಿಝ್ವಾನ್ ಅಹ್ಮದ್ ಕೆಂಚನಕೆರೆ, ಅಂಗರಗುಡ್ಡೆ ಬದ್ರಿಯ ಜುಮಾ ಮಸೀದಿ ಉಪಾಧ್ಯಕ್ಷ ಮಯ್ಯದ್ದಿ ಪುನರೂರು, ಕಾರ್ಯದರ್ಶಿ ಹುಸೈನ್, ಕೋಶಾಧಿಕಾರಿ ಯಾಸೀರ್, ಅಂಗರಗುಡ್ಡೆ ಬದ್ರಿಯಾ ದಫ್ ಕಮೀಟಿಯ ಉಪಾಧ್ಯಕ್ಷ ಮುಬಾರಕ್ ಪುನರೂರು, ಕಾರ್ಯದರ್ಶಿ ಇಕ್ಬಾಲ್ ಅಂಗರಗುಡ್ಡೆ, ಜೊತೆಕಾರ್ಯದರ್ಶಿ ಶಾಹಿಲ್ ಎಂ.ಎಚ್., ಸದಸ್ಯ ತನ್ವೀರ್ ಅಂಗರಗುಡ್ಡೆ,
ಸಮಾಜ ಸೇವಕ ಶಂಸುದ್ದೀನ್ ಅಂಗರಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.







