ಮೀಫ್ ಆಯೋಜಿಸಿದ್ದ ಅಂತರ್ ಜಿಲ್ಲಾ ಕ್ರೀಡಾ ಸ್ಪರ್ಧೆ ಥ್ರೋ ಬಾಲ್ ನಲ್ಲಿ ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕ ದ್ವಿತೀಯ ಸ್ಥಾನ

ಬಂಟ್ವಾಳ : ಕಲ್ಲಡ್ಕ ಪರಿಸರದ ಗೋಳ್ತಮಜಲು ಪ್ರದೇಶದಲ್ಲಿರುವ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಮಂಗಳೂರು ಮೀಫ್ (MEIF) ಆಯೋಜಿಸಿದ್ದ ಅಂತರ್ ಜಿಲ್ಲಾ ಕ್ರೀಡಾ ಸ್ಪರ್ಧೆಯಲ್ಲಿ ಮಿಂಚಿ, ಥ್ರೋಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇದಕ್ಕೂ ಮೊದಲು ಹಲವು ಅಂತರ್-ಕಾಲೇಜು ಕ್ರೀಡಾಕೂಟಗಳಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿರುವ ಈ ಕಾಲೇಜಿನ ವಿದ್ಯಾರ್ಥಿನಿಯರು, ನ.11ರಂದು ಮಂಗಳೂರಿನ ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನ ಪ್ರಾಯೋಜಕತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೀಫ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಂಡಿದ್ದ ಥ್ರೋಬಾಲ್ ಸ್ಪರ್ಧೆಯಲ್ಲಿ ಉಜ್ವಲ ಪ್ರದರ್ಶನ ನೀಡಿದ್ದಾರೆ.
ಪ್ರಥಮ ವಿಜ್ಞಾನ ವಿಭಾಗದ ನೂಹ ಮರಿಯಮ್ ಹೈದರ್, ಜೈನಬ್ ನಸ್ರೀನ್, ದ್ವಿತೀಯ ಕಲಾ ವಿಭಾಗದ ಮೈಮುನ ತನ್ವಿಲ, ದ್ವಿತೀಯ ವಾಣಿಜ್ಯ ವಿಭಾಗದ ಅಶ್ಮಿಯಾ, ಅಲಿಫಾ ಆಯಿಷ, ರಫಾ, ಜುವೇರಿಯಾ, ಸಫ್ರೀನ, ಬಿ.ಎಸ್. ಶಬೀಬಾ ಆಫಿಯಾ ಹಾಗೂ ಪ್ರಥಮ ವಾಣಿಜ್ಯ ವಿದ್ಯಾರ್ಥಿನಿಯರಾದ ಆಯಿಷತ್ ರುಶೀದ, ನೆಬಿಸತ್ ಹಿಬಾ, ನಫೀಸತ್ತುಲ್ ಶಹಲ ಭಾಗವಹಿಸಿ ತಮ್ಮ ಸಾಮರ್ಥ್ಯ ತೋರಿದರು. ಇವರ ನಡುವೆ ಪ್ರಥಮ ವಾಣಿಜ್ಯ ವಿಭಾಗದ ಆಯಿಷತ್ ರುಶೀದ ಅವರು ಅತ್ಯುತ್ತಮ ಪ್ರದರ್ಶನಕ್ಕಾಗಿ ‘ಬೆಸ್ಟ್ ಥ್ರೋವರ್’ ಪ್ರಶಸ್ತಿ ಪಡೆದರು.
ಹೈಸ್ಕೂಲ್ ಮತ್ತು ಪಿಯು ಕಾಲೇಜುಗಳಿಗೆ ಪ್ರತ್ಯೇಕವಾಗಿ ಆಯೋಜಿಸಿದ್ದ ಈ ಕ್ರೀಡಾಕೂಟದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 37 ವಿದ್ಯಾಸಂಸ್ಥೆಗಳು ಭಾಗವಹಿಸಿದ್ದವು. ಸ್ಪರ್ಧೆಯನ್ನು ಹಿರಾ ಮಹಿಳಾ ಕಾಲೇಜಿನ ಜನಾಬ್ ಅಬ್ದುಲ್ ರಹಮಾನ್ ಹಾಗೂ ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕದ ಕೋಶಾಧಿಕಾರಿ ಹೈದರ್ ಅಲಿ ಅವರು ಪಂದ್ಯಾವಳಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದರು.







